ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗಳಾದ ಬಿಜೆಪಿ ಸಂಸದೆ ಪ್ರಜ್ನಾ ಸಿಂಗ್ ಠಾಕೂರು ಮತ್ತು ಇತರರನ್ನು ಸೋಮವಾರದಂದು ವಿಶೇಷ ಎನ್.ಐ.ಎ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಇಂದು ಆಕೆ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎಂಬುದನ್ನು ಪ್ರಜ್ನಾರ ವಕೀಲ ಜೆಪಿ ಮಿಶ್ರಾ ಖಚಿತ ಪಡಿಸಿದ್ದಾರೆ.
ಈ ಹಿಂದೆ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯನ್ನು ಎನ್.ಐ.ಎ ವಿಳಂಬಪಡಿಸುತ್ತಿದೆಯೇ ಹೊರತು ತಾವಲ್ಲ ಎಂದು ಡಿಸೆಂಬರ್ 19ರಂದು ಮಿಶ್ರಾ ಎಂದು ಹೇಳಿದ್ದರು.
ಠಾಕೂರ್ ಮಾತ್ರವಲ್ಲದೆ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್, ಸುಧಾಕರ್ ಚತುರ್ವೇದಿ, ಕುಲಕರ್ಣಿ, ಅಜಯ್ ರಾಹಿರ್ಕರ್, ನಿವೃತ್ತ ಸೇನಾಧಿಕಾರಿ ರಮೇಶ್ ಉಪಾಧ್ಯಾಯ ಮತ್ತು ಸುಧಾಕರ್ ದ್ವಿವೇದಿ ಈ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು.
ಈ ಹಿಂದೆ 7 ಆರೋಪಿಗಳಲ್ಲಿ ನಾಲ್ವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಸಾಧ್ವಿ ಪ್ರಜ್ನಾ ಠಾಕೂರ್, ಪುರೋಹಿತ್, ಸುಧಾಕರ್ ಚತುರ್ವೇದಿ ಡಿ.19ರಂದು ಎನ್.ಐ.ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ.
ಆರೋಪಿಗಳ ವಿರುದ್ಧ ಯು.ಎ.ಪಿ.ಎ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.