ಲಖನೌ : ಕೋವಿಡ್ 19ಗೆ ಜಾರಿಗೊಳ್ಳಲಿರುವ ಲಸಿಕೆಯನ್ನು ಅದು ಬಿಜೆಪಿ ಲಸಿಕೆ, ಅದನ್ನು ತಾವು ಬಳಸುವುದಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.
“ಬಿಜೆಪಿಯಿಂದ ಬಳಕೆಯಾಗುವ ಲಸಿಕೆಯನ್ನು ನಾನು ಹೇಗೆ ನಂಬಲಿ? ಬಿಜೆಪಿಯ ಲಸಿಕೆಯನ್ನು ನಾವು ಹೊಂದಲು ಸಾಧ್ಯವಿಲ್ಲ” ಎಂದು ಅಖಿಲೇಶ್ ಹೇಳಿದ್ದಾರೆ. 2022ರಲ್ಲಿ ತಮ್ಮ ಸರಕಾರ ಅಧಿಕಾರಕ್ಕೆ ಬರಲಿದೆ, ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.