ಫ್ಲಿಪ್​ಕಾರ್ಟ್​ ವಿರುದ್ಧ 1,100 ಕೋಟಿ ರೂ. ಪಾವತಿ ಆದೇಶಕ್ಕೆ ಹೈಕೋರ್ಟ್ ತಡೆ

Prasthutha|

ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ 1,100 ಕೋಟಿ ರೂ. ಪಾವತಿಸಲು ಇ-ಕಾಮರ್ಸ್ ಕಂಪನಿ ಫ್ಲಿಪ್​ಕಾರ್ಟ್‌ಗೆ ಆದಾಯ ತೆರಿಗೆ ಆಯುಕ್ತರು ನೀಡಿರುವ ತೀರ್ಪಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

- Advertisement -

ಮುಂದಿನ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ನಿಗದಿಪಡಿಸಲಾಗಿದ್ದು, ಅಲ್ಲಿಯವರೆಗೂ ಫ್ಲಿಪ್​ಕಾರ್ಟ್​ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್​ ಸೂಚಿಸಿದೆ.

ಆದಾಯ ತೆರಿಗೆ ಆಯುಕ್ತರು ನೀಡಿರುವ ತೀರ್ಪಿನ ವಿರುದ್ಧ ಫ್ಲಿಪ್​ಕಾರ್ಟ್​ ಕರ್ನಾಟಕ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿತ್ತು.

- Advertisement -

ಬಾಕಿ ಪಾವತಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿಲ್ಲ. ಬಾಕಿ ಪಾವತಿಗೆ ಕೇವಲ ನಾಲ್ಕು ದಿನಗಳ ಕಾಲಾವಕಾಶ ನೀಡಿರುವುದಕ್ಕೆ ಯಾವುದೇ ಸಮರ್ಥನೆಗಳಿಲ್ಲ. ಇದರಿಂದಾಗಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸುವುದಕ್ಕೂ ನಿರ್ಬಂಧ ವಿಧಿಸಿದಂತಾಗಿತ್ತು ಎಂದು ಫ್ಲಿಪ್​ಕಾರ್ಟ್ ಅರ್ಜಿಯಲ್ಲಿ ಉಲ್ಲೇಖಿಸಿತ್ತು.



Join Whatsapp