ಮಂಗಳೂರು: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 158 ಮಂದಿ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಖಚಿತವಾಗಿದೆ.
ಉಳ್ಳಾಲ ವಿಧಾನ ಸಭಾ ಕ್ಷೇತ್ರದಲ್ಲಿ 51, ಮಂಗಳೂರು ಉತ್ತರದಲ್ಲಿ 28, ಮೂಡಬಿದಿರೆಯಲ್ಲಿ 13, ಬಂಟ್ವಾಳದಲ್ಲಿ 22, ಪುತ್ತೂರಿನಲ್ಲಿ 13, ಬೆಳ್ತಂಗಡಿಯಲ್ಲಿ 21, ಸುಳ್ಳ್ಯದಲ್ಲಿ 7, ಕಡಬದಲ್ಲಿ 3, ಸ್ಥಾನಗಳನ್ನು ಎಸ್.ಡಿ.ಪಿ.ಐ ಬೆಂಬಲಿತರು ಗೆದ್ದು ಕೊಂಡಿರುವುದನ್ನು ಪಕ್ಷದ ನಾಯಕರು ಖಚಿತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 485 ಎಸ್.ಡಿ.ಪಿ.ಐ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ಎಣಿಕೆ ಮುಂದುವರಿಯುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಎಸ್.ಡಿ.ಪಿ.ಐ 190ರ ಗಡಿಯನ್ನು ದಾಟಿದೆ.