ನವದೆಹಲಿ: ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ’ಪೊಲ್ಯೂಟಿಂಗ್ ವೆಹಿಕಲ್ಸ್ ’ (ಮಾಲಿನ್ಯಕಾರಕ ವಾಹನಗಳು) ಅನ್ನುವ ಬದಲಿಗೆ ’ಪೊಲಿಟಿಕಲ್ ’ ಎಂದು ಹೇಳಿದ ಘಟನೆ ನಡೆದಿದೆ.
ಹಳೆಯ ರಾಜಕೀಯ ವಾಹನಗಳನ್ನು ಬದಲಾಯಿಸಲಾಗುವುದು .. ಕ್ಷಮಿಸಿ ಹಳೆಯ ಮಾಲಿನ್ಯಕಾರಕ ವಾಹನಗಳಿಗೆ ಆದ್ಯತೆ ನೀಡಲಾಗುವುದು..’ ಎನ್ನುತ್ತಾ ಬಜೆಟ್ ಮಂಡನೆ ಮುಂದುವರಿಸಿದರು..ಈ ಸ್ವಾರಸ್ಯಕರ ಘಟನೆ ಇಡೀ ಸದನದಲ್ಲಿ ನಗೆಯುಕ್ಕುವಂತೆ ಮಾಡಿತು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು ನೆಟ್ಟಿಗರು ಇದಕ್ಕೆ ತರಹೇವಾರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
'Replacing old political vehicles .. umm sorry old polluting vehicles will be a priority..’ says FM @nsitharaman with a disarming smile.@KaunSandeep @SupriyaShrinate@LambaAlka @Radhika_Khera@pramodtiwari700#Budget2023 #BudgetSession #NirmalaSitaraman pic.twitter.com/QPGmnCGlku
— Vishal Pandey 🇮🇳 (@balliaticvishal) February 1, 2023