ಮೇವತ್’ನಲ್ಲಿ ಬಜರಂಗ ದಳದಿಂದ ಮುಸ್ಲಿಂ ಯುವಕನ ಹತ್ಯೆ

Prasthutha|

ಚಂಡೀಗಡ: ಹರಿಯಾಣದ ಮೇವತ್ ಜಿಲ್ಲೆಯ ಹುಸೈನ್’ಪುರ ಗ್ರಾಮದಲ್ಲಿ 20 ಹರೆಯದ ಮುಸ್ಲಿಮ್ ಯುವಕ ವಾರಿಸ್ ಎಂಬವರನ್ನು ಕೊಲೆ ಮಾಡಲಾಗಿದ್ದು, ಬಜರಂಗ ದಳದ ಕಾರ್ಯಕರ್ತರೇ ಈ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

ಕೊಲೆ ನಡೆದ ಸ್ವಲ್ಪ ಹೊತ್ತಿನಲ್ಲಿ ಒಂದು ವೀಡಿಯೋ ಬಿಡುಗಡೆಯಾಗಿದೆ. ಅದರಲ್ಲಿ ಬಜರಂಗ ದಳದ ಸದಸ್ಯರು ಒಂದು ಕಾರಿನೊಳಗಡೆ ವಾರಿಸ್ ಮತ್ತಿಬ್ಬರು ಮುಸ್ಲಿಂ ಯುವಕರನ್ನು ವಾಚಾಮಗೋಚರವಾಗಿ ಬಯ್ಯುತ್ತ ಹಲ್ಲೆ ನಡೆಸುತ್ತಿರುವುದು ತಿಳಿಯುತ್ತದೆ.

ಸ್ಥಳೀಯರ ಪ್ರಕಾರ, ಬಜರಂಗದಳದ ದನ ತಪಾಸಣೆ ಗುಂಪಿನವರು ಈ ದಾಳಿ ಮತ್ತು ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ್ದಾರೆ.

- Advertisement -

ದನ ರಕ್ಷಣಾ ಗುಂಪೊಂದರ ಮೋನು ಮನೇಸರ್ ಎಂಬ ವ್ಯಕ್ತಿ ಮುಸ್ಲಿಮರ ಮೇಲೆ ಕಾರಣವಿಲ್ಲದೆ ಹಲ್ಲೆ ನಡೆಸುವುದರಲ್ಲಿ ಕುಖ್ಯಾತನಾಗಿದ್ದು ಆತನು ವಾರಿಸ್ ಕೊಲೆ ಮಾಡಿದ್ದಾನೆ ಎಂದು ಶಾಹಿದ್ ಎಂಬ ಸ್ಥಳೀಯ ವ್ಯಕ್ತಿ ತಿಳಿಸಿದ್ದಾರೆ.

ಎಸ್ಎಚ್ಓ- ಠಾಣಾಧಿಕಾರಿಯ ಪ್ರಕಾರ ವಾರಿಸ್ ಅವರು ಕಾರು ಅಪಘಾತವೊಂದರಲ್ಲಿ ಸಾವಿಗೀಡಾಗಿದ್ದಾರೆ. ಈ ಸಾವಿನ ಹಿಂದೆ ಹಿಂದುತ್ವವಾದಿಗಳ ಕೈವಾಡ ಇದೆ ಎಂಬ ಆರೋಪ ಸಂಪೂರ್ಣ ಆಧಾರರಹಿತ ಎಂಬುದು ಅವರ ಅಭಿಮತ.  

ಸಾಮಾಜಿಕ ಕಾರ್ಯಕರ್ತರ ಒಂದು ಗುಂಪು ವಾರಿಸ್ ಸಾವಿನ ಬಳಿಕ ಧರಣಿ ಸತ್ಯಾಗ್ರಹ ನಡೆಸಿತು. ವಾರಿಸ್ ಸಾವು ಅಪಘಾತದಿಂದ ಅದುದು ಎಂಬ ಪೋಲೀಸರ ಹೇಳಿಕೆ ಹಸೀ ಸುಳ್ಳು ಎಂದು ಪ್ರತಿಭಟನಕಾರರು ತಿಳಿಸಿದರು.

“ವೈರಲ್ ಆಗಿರುವ ವೀಡಿಯೋದಲ್ಲಿ ಬಜರಂಗಿಗಳು ವಾರಿಸ್ ಮತ್ತೂ ಇಬ್ಬರು ಮುಸ್ಲಿಂ ಯುವಕರನ್ನು ಬೆದರಿಸುತ್ತ ಊರು ಯಾವುದು, ಹೆಸರು ಏನು ಎಂದು ಕೇಳುತ್ತ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಿದೆ. ಹೀಗಿರುವಾಗ ಅಪಘಾತದ ಸಾವು ಆಗುವುದು ಹೇಗೆ? ವಾರಿಸ್ ಸಾವಿನ ಬಗ್ಗೆ ಆಳುವವರು, ಕಾನೂನು ಪಾಲಕರು ನ್ಯಾಯ ಕೊಡಿಸಲೇ ಬೇಕು” ಎಂದು ಪ್ರತಿಭಟನಕಾರರು ತಿಳಿಸಿದರು.

ವಾರಿಸ್ ತನ್ನ ಪತ್ನಿ ಮತ್ತು ಪುಟ್ಟ ಮಗುವನ್ನು ಅಗಲಿದ್ದಾರೆ. 



Join Whatsapp