93ನೇ ವಯಸ್ಸಿನಲ್ಲಿ 4ನೇ ಮದುವೆಯಾದ ಚಂದ್ರನ ಮೇಲೆ ಕಾಲಿಟ್ಟು ಬಂದಿದ್ದ ನಾಸಾ ಗಗನಯಾನಿ

Prasthutha|

ಲಾಸ್ ಏಂಜಲೀಸ್: ಅಮೆರಿಕದ ಗಗನಯಾನಿ ಬುಜ್ ಅಲ್ಡ್ರಿನ್ ತಮ್ಮ 93ನೇ ವಯಸ್ಸಿನಲ್ಲಿ 4ನೇ ಮದುವೆಯಾಗಿದ್ದಾರೆ. ಅವರು 1963 ರಲ್ಲಿ ಚಂದ್ರನ ಮೇಲೆ ಕಾಲಿಟ್ಟು ಬಂದು ಮಹತ್ವದ ಸಾಧನೆ ಮಾಡಿದ್ದರು.

- Advertisement -

ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ನಾಸಾದ ಮಾಜಿ ಗಗನಯಾನಿ, ಫೈಟರ್ ಪೈಲಟ್, ಸಕ್ರಿಯ ವಿಜ್ಞಾನಿಯಾಗಿರುವ ಬುಜ್ ಅವರು ತಮ್ಮ ಆಪ್ತರ ಸಮ್ಮುಖದಲ್ಲಿ 64 ವರ್ಷದ ತಮ್ಮ ಬಹುಕಾಲದ ಗೆಳತಿ ಡಾ. ಅಂಕಾ ಫೌರ್ ಅವರನ್ನು ವರಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಅಮೆರಿಕದ ಗಗನಯಾನಿ ಬುಜ್ ಅಲ್ಡ್ರಿನ್ ಅವರು, ‘ನನ್ನ 93 ನೇ ಜನ್ಮದಿನದ ಈ ಸಂದರ್ಭದಲ್ಲಿ ನಾನು ಬಹುವಾಗಿ ಗೌರವಿಸುವ ಅಂಕಾ ಅವರರೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇನೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ. ಹದಿಹರೆಯದ ಜೋಡಿ ಮನೆಯಿಂದ ಓಡಿಹೋಗುವಂತೆ ನನ್ನ ಮನ ಇಂದು ಕುಣಿಯುತ್ತಿದೆ’ ಎಂದು ಹೇಳಿದ್ದಾರೆ. ಈ ಮೊದಲು 1954 ರಲ್ಲಿ ಜೋಆನ್, 1975ರಲ್ಲಿ ಬೇವರ್ಲಿ, 1988ರಲ್ಲಿ ಲೂಯೀಸ್ ಡ್ರಿಗ್ಸ್ ಅವರನ್ನು ಬುಜ್ ಮದುವೆಯಾಗಿದ್ದರು. ನಾಸಾದ ಗಗನಯಾನಿಗಳಾಗಿದ್ದ ನೀಲ್ ಅರ್ಮ್‌ಸ್ಟ್ರಾಂಗ್, ಮಿಚೆಲ್ ಕೋಲಿನ್ಸ್ ಜೊತೆ 1969ರಲ್ಲಿ ಬುಜ್ ಅವರು ಅಪೋಲೊ 11 ನೌಕೆಯ ಮೂಲಕ ಚಂದ್ರನ ಮೇಲೆ ಕಾಲಿಟ್ಟು ಬಂದಿದ್ದರು. 1971ರಲ್ಲಿ ನಾಸಾದಿಂದ ನಿವೃತ್ತಿಯಾಗಿದ್ದರು. ಬಳಿಕ 1978ರಲ್ಲಿ ಸ್ಪೇಸ್‌ಶೇರ್ ಎಂಬ ಎನ್‌ಜಿಎ ತೆರೆದು ಅದರ ಮೂಲಕ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

Join Whatsapp