ಮೊರ್ಬಿಯ ತೂಗು ಸೇತುವೆ ಕುಸಿದು 140 ಜನರ ಜೀವ ಕಸಿದುಕೊಂಡ ದುರಂತಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳುಗಳ ಬಳಿಕ ಗುಜರಾತ್ ಪೊಲೀಸರು ಒರೇವ ಗುಂಪಿನ ನಿರ್ವಹಣಾ ನಿರ್ದೇಶಕ – ಎಂಡಿ ಜಯ್ಸುಖ್ ಪಟೇಲ್’ಗೆ ಬಂಧನ ವಾರಂಟ್ ಜಾರಿ ಮಾಡಿದ್ದಾರೆ.
ಇವರು ಸ್ಥಳೀಯ ಕಾರ್ಪೊರೇಟ್ ಕಂಪೆನಿ ಒರೇವ ಗುಂಪಿನ ಪ್ರವರ್ತಕ ಆಗಿದ್ದು, ಅದು ಮೊರ್ಬಿ ತೂಗು ಸೇತುವೆಯ ರಿಪೇರಿ, ನವೀಕರಣ ಮತ್ತು ನಡೆಸುವ ಗುತ್ತಿಗೆ ಪಡೆದಿತ್ತು.
ಪಟೇಲ್’ಗೆ ಭಾನುವಾರು ಬಂಧನದ ವಾರಂಟ್ ತಲುಪಿಸಿದರು. ಅದೇ ವೇಳೆ ಲುಕ್ ಔಟ್ ನೋಟಿಸ್ ಕೂಡ ಹೊರಡಿಸಿದ್ದಾರೆ. 2022ರ ಅಕ್ಟೋಬರ್ 29ರಂದು ದುರಂತ ನಡೆದಂದಿನಿಂದ ಪಟೇಲ್ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.