BBC ಸಾಕ್ಷ್ಯಚಿತ್ರ ತಡೆ: ಗೋಡ್ಸೆ ಸಿನಿಮಾವನ್ನು ಬ್ಯಾನ್ ಮಾಡ್ತೀರಾ: ಬಿಜೆಪಿಗೆ ಉವೈಸಿ ಪ್ರಶ್ನೆ

Prasthutha|

ನವದೆಹಲಿ: 2002ರ ಗುಜರಾತ್ ಗಲಭೆ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ತಡೆಯುವ ಆಡಳಿತ ಸರ್ಕಾರದ ಕ್ರಮದ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -


ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆ ಕುರಿತ ಮುಂಬರುವ ಚಿತ್ರಕ್ಕೂ ಪ್ರಧಾನಿಯವರು ತಡೆಯೊಡ್ಡುತ್ತಾರೆಯೇ ಎಂದು ಪ್ರಶ್ನಿಸಿದರು.


2002ರಲ್ಲಿ ನಡೆದ ಗುಜರಾತ್ ಗಲಭೆ ಸಂದರ್ಭ ಆಗಿನ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಲಾಗಿದ್ದ ಬಿಬಿಸಿ ಸಾಕ್ಷ್ಯಚಿತ್ರದ ಎಲ್ಲಾ ಲಿಂಕ್’ಗಳನ್ನು ತೆಗೆದು ಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟ್ಟರ್ ಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ನಿರ್ಧಾರವನ್ನು ವಿರೋಧಿಸಿದ ಉವೈಸಿ ‘ಗುಜರಾತ್ ಗಲಭೆಯಲ್ಲಿ ಬಾಹ್ಯಾಕಾಶ ಅಥವಾ ಆಕಾಶದಿಂದ ಬಂದು ಯಾರಾದರೂ ಜನರನ್ನು ಕೊಂದಿದ್ದಾರೆಯೇ? ಹತ್ಯೆ ಹಾಗೂ ಗಲಭೆಯಾಗಿರುವುದು ನಿಜ. ಅದರ ಬಗ್ಗೆ ಸಾಕ್ಷ್ಯಚಿತ್ರ ಮಾಡುವುದು ತಪ್ಪೇನಿದೆ. ಅದರ ಮೇಲೆ ಯಾಕೆ ನಿಷೇಧ ಹೇರಲಾಗಿದೆ ಎಂದರು.

- Advertisement -


ನಾನು ಪ್ರಧಾನಿ ಮತ್ತು ಬಿಜೆಪಿ ನಾಯಕರನ್ನು ಕೇಳುತ್ತೇನೆ, ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈಗ ಗೋಡ್ಸೆ ಮೇಲೆ ಸಿನಿಮಾ ಬಂದಿದೆ. ಗೋಡ್ಸೆ ಮೇಲೆ ತಯಾರಾಗುತ್ತಿರುವ ಸಿನಿಮಾವನ್ನು ಪ್ರಧಾನಿ ನಿಷೇಧಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.

Join Whatsapp