ಬೆಂಗಳೂರು: ಮೆಟ್ರೋ ಪಿಲ್ಲರ್ ಉರುಳಿ ಬಿದ್ದು ತಾಯಿ-ಮಗು ಸಾವು ಪ್ರಕರಣ ಕುರಿತು ಮೆಟ್ರೋ ಎಂಡಿ ಅಂಜುಂ ಪರ್ವೇಜ್ರನ್ನು ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ.
ಐ ಐ ಟಿ ವರದಿಯ ಆಧಾರದ ಮೇರೆಗೆ 30 ಪ್ರಶ್ನೆಗಳನ್ನು ಕೇಳಿದ ಪೊಲೀಸರು, ಕಾಮಗಾರಿಗೆ ಸಂಬಂಧಪಟ್ಟ ಇಂಜಿನಿಯರ್ಸ್ಗಳಿಗೆ ಟ್ರೈನಿಂಗ್ ಕೊಟ್ಟಿದ್ದು ಯಾರು?, ಟ್ರೈನಿಂಗ್ ಪ್ರೊಸೆಸ್ ಯಾವ ರೀತಿಯಲ್ಲಿತ್ತು?, ಮೆಟ್ರೋ ಪಿಲ್ಲರ್ ಡಿಸೈನ್ ಯಾರು ಮಾಡಿದ್ರು..?, ಆ ಒಂದು ಪಿಲ್ಲರ್ ಮಾತ್ರ ಬೀಳೋದಕ್ಕೆ ಪ್ರಮುಖ ಕಾರಣ ಏನು..? ಹೀಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರ ಜೊತೆಗೆ ಕೆಲ ಡಾಕ್ಯೂಮೆಂಟ್ಸ್ಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಪತಿಯೊಂದಿಗೆ ಬೈಕ್ನಲ್ಲಿ ಬೆಂಗಳೂರಿನ ನಾಗವಾರ ಬಳಿ ತೆರಳುತ್ತಿರುವ ಸಂದರ್ಭದಲ್ಲಿ ನಿರ್ಮಾಣ ಹಂತದ 40 ಅಡಿ ಎತ್ತರದ ಮೆಟ್ರೋ ಪಿಲ್ಲರ್ ಕುಸಿದು ತೇಜಸ್ವಿನಿ (29) ಹಾಗೂ ಇವರ ಪುತ್ರ ವಿಹಾನ್ (2.5) ಮೃತಪಟ್ಟಿದ್ದರು.