ಉತ್ತರ ಪ್ರದೇಶ: ಎಸ್.ಪಿ ನಾಯಕನ ಪುತ್ರಿ ಜತೆ ಪರಾರಿಯಾದ ಬಿಜೆಪಿ ಮುಖಂಡ

Prasthutha|

ಲಖನೌ: ಇಬ್ಬರು ಮಕ್ಕಳ ತಂದೆಯಾಗಿರುವ ಬಿಜೆಪಿಯ ಮುಖಂಡರೊಬ್ಬರು ಸಮಾಜವಾದಿ ಪಕ್ಷದ ನಾಯಕರೊಬ್ಬರ ಮಗಳೊಂದಿಗೆ ಓಡಿ ಹೋಗಿರುವ ಪ್ರಕರಣ ಉತ್ತರ ಪ್ರದೇಶದ ಹರ್ದೋಯಿ ನಗರದಲ್ಲಿ ನಡೆದಿದೆ.

- Advertisement -

ಹರ್ದೋಯಿ ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಆಶಿಶ್ ಶುಕ್ಲಾ (45) ಈ ಪ್ರಕರಣದ ಆರೋಪಿ. ಯುವತಿಯ ತಂದೆ ದಾಖಲಿಸಿದ ಎಫ್ಐಆರ್ ಆಧರಿಸಿ, ತನಿಖೆ ಕೈಗೊಂಡಿರುವುದಾಗಿ ಇಲ್ಲಿನ ಪೊಲೀಸರು ಬುಧವಾರ ತಿಳಿಸಿದ್ದಾರೆ.

‘ಶುಕ್ಲಾ ಅವರು ಕೆಲ ವರ್ಷಗಳಿಂದ ಎಸ್.ಪಿ ನಾಯಕರೊಬ್ಬರ ಪುತ್ರಿಯೊಂದಿಗೆ ಸಂಬಂಧ ಹೊಂದಿದ್ದರು. ಇಬ್ಬರೂ ಕೆಲ ದಿನಗಳ ಹಿಂದೆಯೇ ಓಡಿ ಹೋಗಿದ್ದಾರೆ. ಅದು ಬುಧವಾರ ಬಹಿರಂಗವಾಗಿದೆ’ ಎಂದು ಮೂಲಗಳು ತಿಳಿಸಿವೆ.

- Advertisement -

‘ಈ ವಿಷಯವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಶುಕ್ಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ’ ಎಂದು ಬಿಜೆಪಿಯ ಸ್ಥಳೀಯ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಹೇಳಿದ್ದಾರೆ.
ವಿವಾಹಿತ ಶುಕ್ಲಾ ಅವರಿಗೆ 21 ವರ್ಷದ ಪುತ್ರ ಮತ್ತು ಏಳು ವರ್ಷದ ಪುತ್ರಿಯಿದ್ದಾರೆ.



Join Whatsapp