ನವದೆಹಲಿ: ಭಾರತದ ಅತಿ ಶ್ರೀಮಂತರಾದ ಶೇಕಡಾ 1ರಷ್ಟು ಜನರು ದೇಶದ 40 ಶೇಕಡಾ ಸಂಪತ್ತನ್ನು ಹೊಂದಿದ್ದಾರೆ.
ಆಕ್ಸ್ ಫಾಮ್ ಅಂತಾರಾಷ್ಟ್ರೀಯ ಅಸಮಾನತೆ ಅಂಕಿ ಅಂಶ ಸಂಸ್ಥೆಯು ಈ ಹೊಸ ಸಂಶೋಧನೆಯನ್ನು ಬಿಡುಗಡೆ ಮಾಡಿದೆ. ಕಳೆದೊಂದು ದಶಕದಿಂದ ಭಾರತದ ಶ್ರೀಮಂತರು ಬೇರೆ ಯಾವುದೇ ದೇಶದ ಶ್ರೀಮಂತರಿಗಿಂತ ಹೆಚ್ಚು ವೇಗವಾಗಿ ಬೆಳೆದಿದ್ದಾರೆ. ಶ್ರೀಮಂತ-ಬಡವರ ನಡುವಿನ ಅಸಮಾನತೆ ಹೆಚ್ಚುತ್ತಲೇ ಇದೆ.
2017- 21ರ ನಡುವೆ ಗೌತಮ್ ಅದಾನಿ ಒಬ್ಬರೇ 1.79 ಲಕ್ಷ ಹೆಚ್ಚುವರಿ ಕೂಡಿ ಹಾಕಿದ್ದಾರೆ. ಭಾರತದ ಕೋಟ್ಯಾಧೀಶರು ಹಿಂದೆ 5% ತೆರಿಗೆ ತೆರಬೇಕಿತ್ತು. ಈಗ 2% ತೆರಿಗೆ ಕೊಟ್ಟರೆ ಮುಗಿಯಿತು.
ಇನ್ನು ಗಂಡಸರ ಸರಾಸರಿ 1 ರೂಪಾಯಿ ಗಳಿಕೆಗೆ ಮಹಿಳೆಯರ ಗಳಿಕೆ 63 ಪೈಸೆ ಇದ್ದು, ಇಲ್ಲೂ ಅಸಮಾನತೆ ಹೆಚ್ಚಾಗುತ್ತಲೇ ಇದೆ.
ಭಾರತದ ಬಿಲಿಯಾಧೀಶರ ಸಂಖ್ಯೆಯು 2020ರಲ್ಲಿ 102 ಇದ್ದುದು 2022ರಲ್ಲಿ 166ಕ್ಕೆ ಏರಿದೆ.