ಬೆಂಗಳೂರು: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜಾಲತಾಣದ ವಿಳಾಸವನ್ನು ಬದಲಾಯಿಸಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಂದು ಬದಲಾಯಿಸಲಾಗಿದೆ.
ಇನ್ನು ಮುಂದೆ ಜಾಲತಾಣದ ವಿಳಾಸ http://sslc.karnataka.gov.in ವನ್ನು ಇ-ಆಡಳಿತದ ನೆರವಿನಿಂದ http://kseab.karnataka.gov.inಎಂದು ಅಭಿವೃದ್ಧಿಪಡಿಸಲಾಗಿದೆ. ಈ ಜಾಲತಾಣ ಜ.10ರಿಂದಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.
SSLC ಪರೀಕ್ಷೆಗಳು, ಮಂಡಳಿಯ ಇತರ ಪರೀಕ್ಷೆಗಳು, ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಚಟುವಟಿಕೆಗಳ ಆನ್ಲೈನ್ ಕಾರ್ಯಗಳು, ಶಾಲಾ/ಬಿಇಒ ಲಾಗಿನ್ ಸೇರಿ ಇತರ ಸೇವೆಗಳು ಹೊಸ ವಿಳಾಸದಲ್ಲಿ ಲಭ್ಯವಾಗಲಿವೆ.