ಮಂಗಳೂರು: ಕಳೆದ ಭಾನುವಾರ ಬೆಳ್ತಂಗಡಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ಮರಣ ಹೊಂದಿದ ನೌಶಾದ್ ಹಾಜಿಯವರ ವಾಹನ ಚಾಲಕ ಉಳಾಯಿಬೆಟ್ಟು ನಿವಾಸಿ ಮುಷರ್ರಫ್ ಕುಟುಂಬಕ್ಕೆ ದಾನಿಯೊಬ್ಬರು ನೀಡಿದ ಮೂರು ಸೆಂಟ್ಸ್ ಜಾಗದಲ್ಲಿ ‘ಅಲ್ ಇಮಾದ್ ನೌಷಾದ್ ಹಾಜಿ ಫೌಂಡೇಶನ್’ ಉಸ್ತುವಾರಿಯಲ್ಲಿ ಮನೆ ನಿರ್ಮಿಸಿ ಕೊಡಲು ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.
ಗೃಹ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಉದ್ಯಮಿ ಅಬ್ದುಲ್ ಲತೀಫ್ ಗುರುಪುರ ವಹಿಸಿಕೊಂಡಿದ್ದಾರೆ.
ಉಳಾಯಿಬೆಟ್ಟು ಜಮಾಅತ್ ಅದ್ಯಕ್ಷ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಶಿಲಾನ್ಯಾಸವನ್ನು ಮರ್ಹೂಂ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಸುಪುತ್ರ ಇರ್ಶಾದ್ ದಾರಿಮಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಊರಿನ ಹಾಗು ಪರ ಊರಿನ ಪ್ರಮುಖರು, ನೌಶಾದ್ ಹಾಜಿ ಕುಟುಂಬಸ್ಥರು, ಸಂಘ ಸಂಸ್ಥೆ ಮುಖ್ಯಸ್ಥರು, ಪಂಚಾಯತ್ ಸದಸ್ಯರು, ಮಷರ್ರಫ್ ಮನೆಯವರು, ಜಮಾಅತ್ ಖತೀಬರು ಉಪಸ್ಥಿತರಿದ್ದರು.
ಮನೆ ಕೆಲಸವನ್ನು ಪ್ರಾರಂಭಿಸಲಾಗಿದ್ದು, ಅತೀ ಶೀಘ್ರದಲ್ಲಿ ಮನೆ ಹಾಸ್ತಾಂತರ ಮಾಡಲಾಗುವುದು ಎಂದು ಲತೀಫ್ ಗುರುಪುರ ತಿಳಿಸಿದರು
ಉದ್ಯಮಿ ಅಬ್ದುಲ್ ಲತೀಫ್ ಗುರುಪುರ ಹಲವಾರು ಸಮಾಜ ಸೇವೆಗಳನ್ನು ನಡೆಸಿಕೊಂಡು ಬರುತ್ತಿದ್ದು ಅದರ ಮುಂದುವರಿದ ಭಾಗವಾಗಿ ಮುಷರ್ರಫ್ ಕುಟುಂಬದ ಗೃಹ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಬ್ದುಲ್ ಲತೀಫ್ ಗುರುಪುರ ಅವರಿಗೂ ಮನೆ ನಿರ್ಮಾಣಕ್ಕೆ 3 ಸೆಂಟ್ಸ್ ಜಾಗ ನೀಡಿದ ಕುಟುಂಬಕ್ಕೂ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.