ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ SDPI ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿಗೆ ಅದ್ಧೂರಿ ಸ್ವಾಗತ

Prasthutha|

ಬೆಳ್ತಂಗಡಿ: ಬೆಂಗಳೂರಿನಿಂದ ಆಗಮಿಸಿದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ SDPI ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿಯವರಿಗೆ ಬೆಳ್ತಂಗಡಿಯಲ್ಲಿ ಸೋಮವಾರ ಅದ್ಧೂರಿ ಸ್ವಾಗತ ದೊರೆತಿದೆ.

- Advertisement -

ಬೆಳ್ತಂಗಡಿಗೆ ಬರುತ್ತಿದ್ದಂತೆ ಅವರಿಗೆ ಪಕ್ಷದ ನಾಯಕರು, ಕಾರ್ಯಕರ್ತರು ಹೂವಿನ ಹಾರಗಳನ್ನು ಹಾಕಿ ಸ್ವಾಗತಿಸಿದರು. ಸಾರ್ವಜನಿರು ಮತ್ತು ಬೆಳ್ತಂಗಡಿ ಮತದಾರರಿಂದ ಅಕ್ಬರ್ ಬೆಳ್ತಂಗಡಿಯವರಿಗೆ ಭಾರೀ ಜನ ಬೆಂಬಲ ದೊರೆತಿದೆ. ಬೆಳ್ತಂಗಡಿ ಸಂತೆಕಟ್ಟೆಯಿಂದ ಬಸ್ ನಿಲ್ದಾಣದವರೆಗೆ ಕಾರ್ಯಕರ್ತರಿಂದ ಬೃಹತ್ ಮೆರವಣಿಗೆ ಮೂಲಕ ಜೈಕಾರ ಮೊಳಗಿತು. ರಸ್ತೆಯಿದ್ದಕ್ಕೂ ಸಾರ್ವಜನಿಕರು ಹೂವಿನ ಹಾರ ಮತ್ತು ಶಾಲು ಹೊದಿಸಿ ಸನ್ಮಾನಿಸಿದರು.  

 ಈ ಸಂದರ್ಭದಲ್ಲಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ SDPI ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲ್, ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಗೌಸ್ ಮುನೀರ್ ಚಿಕ್ಕಮಗಳೂರು, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್,  ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷ ನವಾಜ್ ಶರೀಫ್ ಕಟ್ಟೆ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಿತೈಷಿಗಳು, ಅಭಿಮಾನಿಗಳು, ಮತದಾರರು ಉಪಸ್ಥಿತರಿದ್ದರು.

- Advertisement -

Join Whatsapp