ಫೆಲೆಸ್ತೀನ್: ಫೆಲೆಸ್ತೀನ್ ಮಕ್ಕಳ ಶಿಕ್ಷಣದ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪಶ್ಚಿಮ ದಂಡೆಯ 58 ಶಾಲೆಗಳಿಗೆ ಇಸ್ರೇಲಿ ಆಕ್ರಮಿತ ಪಡೆಗಳು ನೆಲಸಮ ಆದೇಶಗಳನ್ನು ನೀಡಿವೆ ಎಂದು ಅರಬ್ ಕ್ಯಾಂಪೇನ್ ಫಾರ್ ಎಜುಕೇಷನ್ ಫಾರ್ ಆಲ್ (ಎಸಿಇಎ) ಎಚ್ಚರಿಸಿದೆ.
ಕಳೆದ ವರ್ಷ ಆರು ಫೆಲೆಸ್ತೀನ್ ಶಾಲೆಗಳನ್ನು ಗುರಿಯಾಗಿಸಿಕೊಂಡು ಆದೇಶಗಳನ್ನು ಹೊರಡಿಸಿದ್ದಾರೆ, ಇದರ ಜೊತೆಗೆ ಜೆರುಸಲೇಂ ಸೇರಿದಂತೆ ಪಶ್ಚಿಮ ದಂಡೆಯ 58 ಶಾಲೆಗಳನ್ನು ಗುರಿಯಾಗಿಸಿಕೊಂಡು ನೆಲಸಮಗೊಳಿಸುವ ನೋಟಿಸ್ ಗಳನ್ನು ನೀಡಲಾಗಿದೆ. ಇದು 6,500 ಕ್ಕೂ ಹೆಚ್ಚು ಫೆಲೆಸ್ತೀನ್ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಮತ್ತು 700 ಕ್ಕೂ ಹೆಚ್ಚು ಶೈಕ್ಷಣಿಕ ಸಿಬ್ಬಂದಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದು ಎಸಿಇಎ ಹೇಳಿಕೆಯಲ್ಲಿ ತಿಳಿಸಿದೆ.
ಶಾಲೆಗಳನ್ನು ನೆಲಸಮ ಮಾಡುವ ನೀತಿಯನ್ನು ನಿಲ್ಲಿಸುವಂತೆ ಇಸ್ರೇಲಿ ಆಕ್ರಮಿತ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಮತ್ತು ಸಂಬಂಧಿತ ವಿಶ್ವಸಂಸ್ಥೆ ಏಜೆನ್ಸಿಗಳು ತಮ್ಮ ಪಾತ್ರ ಮತ್ತು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಡಜನ್ ಗಟ್ಟಲೆ ಪ್ಯಾಲೆಸ್ತೀನ್ ಶಾಲೆಗಳನ್ನು ಧ್ವಂಸಗೊಳಿಸಲು ಇಸ್ರೇಲ್ ಯೋಜನೆ: ಎಜುಕೇಶನ್ ವಾಚ್ಡಾಗ್ ಎಚ್ಚರಿಕೆ
Prasthutha|