ಕ್ರಿಶ್ಚಿಯನ್ ಸ್ಮಶಾನಗಳ ಮೇಲೆ ಯಹೂದಿಯರ ದಾಳಿ: ಹಮಾಸ್ ಕಿಡಿ

Prasthutha|

ಫೆಲೆಸ್ತೀನ್: ಇಸ್ರೇಲ್ ಆಕ್ರಮಿತ ಜೆರುಸಲೆಮ್’ನ ಕ್ರಿಶ್ಚಿಯನ್ ಪ್ರೊಟೆಸ್ಟೆಂಟ್ ಸ್ಮಶಾನದ ಮೇಲೆ ಇಸ್ರೇಲಿ ಯಹೂದಿ ವಸಾಹತುಗಾರರು ನಡೆಸಿದ ದಾಳಿಯನ್ನು ಹಮಾಸ್ ತೀವ್ರವಾಗಿ ಖಂಡಿಸಿದೆ.

- Advertisement -


ಇಸ್ರೇಲ್ ಆಕ್ರಮಿತ ಜೆರುಸಲೆಮ್’ನಲ್ಲಿರುವ ಸ್ಮಶಾನದ ಮೇಲೆ ತೀವ್ರಗಾಮಿ ಯಹೂದಿಯರು ದಾಳಿ ನಡೆಸಿರುವುದು ಮತ್ತು ಸಮಾಧಿಯ ಕಲ್ಲುಗಳನ್ನು ಒಡೆದಿರುವುದು “ನ್ಯಾಯಸಮ್ಮತವಲ್ಲ” ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ.

“ಈ ಕೃತ್ಯವು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಸಂಪ್ರದಾಯಗಳನ್ನು ಉಲ್ಲಂಘಿಸುವ ಅಪರಾಧ ಕೃತ್ಯವಾಗಿದೆ” ಎಂದು ಪ್ರತಿರೋಧ ಚಳುವಳಿಯಾದ ಹಮಾಸ್ ಹೇಳಿದೆ.
ಇಸ್ರೇಲಿ ಆಕ್ರಮಣದಿಂದ ಉಂಟಾಗುವ ಅದರ ದುಷ್ಪರಿಣಾಮಗಳಿಗೆ ಸಂಪೂರ್ಣವಾಗಿ ಅದು ಜವಾಬ್ದಾರವಾಗಿರಬೇಕಾಗುತ್ತದೆ” ಎಂದು ಹಮಾಸ್ ಎಚ್ಚರಿಕೆ ನೀಡಿದೆ.
“ಆಕ್ರಮಿತ ಜೆರುಸಲೆಮ್’ನಲ್ಲಿರುವ ಇಸ್ಲಾಮಿಕ್ ಮತ್ತು ಕ್ರಿಶ್ಚಿಯನ್ ಸ್ಮಶಾನಗಳ ಮೇಲೆ ದಾಳಿ ಮಾಡುವ ಮೂಲಕ ಮತ್ತು ಅಪವಿತ್ರಗೊಳಿಸುವ ಮೂಲಕ ಇಸ್ರೇಲ್ ಅಪರಾಧಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp