ರತ್ಲಾಮ್: ತನಗಾದ ನೋವು ಮತ್ತು ಮಾನಸಿಕ ಯಾತನೆಗಾಗಿ ₹ 10,000 ಕೋಟಿಗೂ ಹೆಚ್ಚು ಪರಿಹಾರ ಒದಗಿಸುವಂತೆ ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಂಡ ವ್ಯಕ್ತಿಯೊಬ್ಬರು ಮಧ್ಯಪ್ರದೇಶ ಸರ್ಕಾರದ ವಿರುದ್ಧ ದಾವೆ ಹೂಡಿದ ಘಟನೆ ವರದಿಯಾಗಿದೆ.
ಮಧ್ಯಪ್ರದೇಶದ ರತ್ಲಾಮ್ನ ಕಾಂತು ಅಲಿಯಾಸ್ ಕಾಂತಿಲಾಲ್ ಭೀಲ್ (35) ಎಂಬುವರು ಅತ್ಯಾಚಾರ ಆರೋಪದಲ್ಲಿ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದರು.
ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು 2022ರ ಅಕ್ಟೋಬರ್ 20ರಂದು ಕಾಂತು ಅವರನ್ನು ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಿದೆ ಎಂದು ಅವರ ಪರ ವಕೀಲ ವಿಜಯ್ ಸಿಂಗ್ ಯಾದವ್ ತಿಳಿಸಿದ್ದಾರೆ. ಪರಿಹಾರ ಕೋರಿ ಮಧ್ಯ ಪ್ರದೇಶ ಸರ್ಕಾರ ಮತ್ತು ತನಿಖಾಧಿಕಾರಿಗಳ ವಿರುದ್ಧ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಜನವರಿ 10ರಂದು ನಡೆಯಲಿದೆ.