ಆಕಾಶದಿಂದ ಏಕಾಏಕಿ ಭೂಮಿಗೆ ಅಪ್ಪಳಿಸಿದ ಬೆಂಕಿಯ ಚೆಂಡು | ಜನತೆಯಲ್ಲಿ ಆತಂಕ

Prasthutha|

ಶಾಂಘೈ : ಆಕಾಶದಿಂದ ಉರುಳಿ ಬಂದ ಬೃಹತ್ ಬೆಂಕಿ ಚೆಂಡೊಂದು ಚೀನಾದ ಯುಶು ನಗರಕ್ಕೆ ಅಪ್ಪಳಿಸಿದೆ ಎನ್ನಲಾದ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಕೆಲವರು ಇದನ್ನು ಕಣ್ಣಾರೆ ಕಂಡಿದ್ದು, ಆತಂಕಗೊಂಡಿದ್ದಾರೆ.

- Advertisement -

ವೀಡಿಯೊದಲ್ಲಿ ಪ್ರಕಾಶಮಾನವಾದ ಚೆಂಡೊಂದು ಮಿನುಗುತ್ತಿರುವುದನ್ನು ಕಾಣಬಹುದು. ವಾಯುವ್ಯ ಚೀನಾದ ಪಶ್ಚಿಮ ಕ್ವಿಗ್ಹೈನಲ್ಲಿ ಭಾರೀ ದೊಡ್ಡ ಸದ್ದು ಒಂದು ಕೇಳಿಬಂದಿದ್ದು, ಪ್ರಕಾಶಮಾನವಾದ ಬಾಲ್ ರೀತಿಯ ವಸ್ತುವೊಂದು ಭೂಮಿಗೆ ಅಪ್ಪಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದೊಂದು ಉಲ್ಕೆಯಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ಚಿಕ್ಕದಾಗಿ ಕಾಣಿಸಿತ್ತು. ಭೂಮಿ ಸಮೀಪಿಸುತ್ತಿದ್ದಂತೆ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಂಡುಬಂದಿತ್ತು ಎಂದು ಕೆಲವರು ಹೇಳಿದ್ದಾರೆ. ಕೆಲವರು ಈ ದೃಶ್ಯವನ್ನು ವೀಡಿಯೊ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಘಟನೆಯಲ್ಲಿ ಯಾರೊಬ್ಬರಿಗೂ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

- Advertisement -

Join Whatsapp