ದುಬಾರಿ ದುನಿಯಾ| ಕೋಳಿ ಮೊಟ್ಟೆ ದರ ದಿಢೀರ್ ಏರಿಕೆ….!

Prasthutha|

ಬೆಂಗಳೂರು: ಕೋಳಿ ಮೊಟ್ಟೆ ದರ ದಿಢೀರ್ ಏರಿಕೆಯಾಗಿದ್ದು, ಸದ್ಯ ಮೊಟ್ಟೆ ಬೆಲೆ 8 ರೂಪಾಯಿವರೆಗೆ ತಲುಪಿದೆ.

- Advertisement -


ಕೆಲ ತಿಂಗಳ ಹಿಂದೆ ಒಂದು ಮೊಟ್ಟೆ ಬೆಲೆ 5-6 ರೂಪಾಯಿವರೆಗೆ ಇತ್ತು ಒಂದು ಟ್ರೇ ಹೋಲ್ ಸೇಲ್ ದರ 180 ರೂಪಾಯಿ ಇತ್ತು. ಆದರೆ ಈಗ ಅದು 195 ರೂಪಾಯಿಗೆ ಏರಿಕೆಯಾಗಿದೆ.


ಚಳಿಗಾಲ ಆರಂಭವಾದಾಗಿನಿಂದ ಮೊಟ್ಟೆ ಬೆಲೆ ಹಂತ ಹಂತವಾಗಿ ಏರಿಕೆ ಕಾಣುತ್ತಿದೆ. ಜನವರಿ ತಿಂಗಳು ಸಹ ಇದೇ ರೀತಿ ಬೆಲೆಗಳು ಸ್ಥಿರವಾಗಿವೆ. ಫೆಬ್ರವರಿಯಲ್ಲಿ ಈ ದರ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. National Egg Co-Ordination Committee ನೀಡಿರುವ ದರಗಳ ಪ್ರಕಾರ, ಅಕ್ಟೋಬರ್ ಮತ್ತು ನವೆಂಬರ್’ನಲ್ಲಿ 100 ಮೊಟ್ಟೆಗಳ ಬೆಲೆ ಸುಮಾರು 400-450 ರೂಪಾಯಿ ಇತ್ತು. ಸದ್ಯ ಈ ಬೆಲೆ 580-590 ರೂ.ಗೆ ಏರಿಕೆಯಾಗಿದೆ. ಅಂದರೆ ಕೋಳಿ ಮೊಟ್ಟೆ ಬೆಲೆ ನೂರಕ್ಕೆ 180 ರೂಪಾಯಿ ಏರಿಕೆಯಾಗಿದೆ.

- Advertisement -


ಸಣ್ಣ ವ್ಯಾಪಾರಿಗಳಿಗೆ 30 ಮೊಟ್ಟೆಯ ಒಂದು ಟ್ರೇ ಮಾರಾಟ ಮಾಡಿದರೆ ನಾಲ್ಕರಿಂದ ಐದು ರೂಪಾಯಿ ಲಾಭಗಳಿಸಬಹುದು ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.



Join Whatsapp