ಪಂಚರತ್ನ ಯೋಜನೆಗಳು ಜಾರಿಯಾದರೆ ಕರ್ನಾಟಕದ ಸಮಗ್ರ ಅಭಿವೃದ್ಧಿ: ಜಾಕೆ ಮಾಧವ ಗೌಡ

Prasthutha|

ಮಂಗಳೂರು: ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷೆ ಡಾ. ಸುಮತಿ ಎಸ್. ಹೆಗ್ಡೆ ಅವರ ನೇತೃತ್ವದಲ್ಲಿ ಕದ್ರಿಯ ಸುಮಾ ಸದನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾರ್ಯಕ್ರಮ ನಡೆಯಿತು.

- Advertisement -


ಸಭೆಯನ್ನು ದ.ಕ.ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಜಾಕೆ ಮಾಧವ ಗೌಡರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಕುಮಾರಣ್ಣ ಅವರ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಾಮಾಣಿಕವಾಗಿ ನುಡಿದಂತೆ ಪಂಚರತ್ನ ಯೋಜನೆ ಜಾರಿಗೊಳಸಲಿದ್ದಾರೆ. ಇದರಿಂದ ಜನರಿಗೆ ನೆಮ್ಮದಿಯ ಜೀವನ ಸಾಗಿಸಲು ಸಹಕಾರವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಗರಿಷ್ಠ ಪ್ರಚಾರ ನಡೆಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದರು.
ಈ ಸಂಧರ್ಭ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್’ನ ಹಲವಾರು ಕಾರ್ಯಕರ್ತರೂ, ಪ್ರಮುಖ ನೇತಾರರೂ ರಿಯಾಝ್ ಎ1 ಕಣ್ಣೂರು ಹಾಗೂ ಹಬೀಬ್ ಫಲ್ನೀರ್ ಇವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.


ಡಾ.ಸುಮತಿ ಎಸ್ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿಜಯದ ಪತಾಕೆಯನ್ನು ಹಾರಿಸಲು ಎಲ್ಲರೂ ಕೈ ಜೋಡಿಸುವಂತೆ ಅವರು ಕರೆ ನೀಡಿದರು.

- Advertisement -


ಈ ಸಂದರ್ಭ ಜೆಡಿಎಸ್ ಮುಖಂಡರಾದ ಜನಾಬ್ ಹೈದರ್ ಪರ್ತಿಪ್ಪಾಡಿ, ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ, ರಾಜ್ಯ ಸಂ.ಕಾರ್ಯದರ್ಶಿ ಝಮೀರ್ ಶಾ, ರಾಜ್ಯ ಮೀನುಗಾರಿಕೆ ಅಧ್ಯಕ್ಷ ರತ್ನಾಕರ ಸುವರ್ಣ, ಯೂತ್ ಉಪಾಧ್ಯಕ್ಷ ಆಸಿಾಫ್ ಎಂ‌ಎಎಸ್ ತೋಡಾರ್ , ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ನಾಗೇಶ್ ಬಲ್ಮಠ, ಕನಕದಾಸ್ ಕೂಳೂರು, ರಾಶ್ ಬ್ಯಾರಿ , ಇಝಾ ಬಜಾಲ್ , ಲತೀಫ್ ವಲಚ್ಚಿಲ್, ವಿನ್ಸೆಂಟ್ , ವೀಣಾ ಶೆಟ್ಟಿ, ಕವಿತಾ , ಶಾರದಾ ಶೆಟ್ಟಿ , ಶಾಲಿಣಿ ರೈ ಶ್ರೀಮಣಿ ಆರ್ ಶೆಟ್ಟಿ ಹಾಗೂ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಇದರ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಲ್ತಾಫ್ ತುಂಬೆ ಹಾಗೂ ಉಪಾಧ್ಯಕ್ಷರಾಗಿ ಇಝಾ ಬಜಾಲ್ ಅವರನ್ನು ಆಯ್ಕೆಮಾಡಲಾಯಿತು. ಅಲ್ತಾಫ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಪ್ರಿಯಾ ಸಾಲಿಯಾನ್ ಧನ್ಯವಾದ ಗೈದರು.



Join Whatsapp