ತೈವಾನ್: ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ಚೀನಾಗೆ ನೆರವು ನೀಡಲು ಸಿದ್ಧ ಎಂದು ತೈವಾನ್ ನ ಅಧ್ಯಕ್ಷ್ಯೆ ತ್ಸೈ ಇಂಗ್-ವೆನ್ ಘೋಷಿಸಿದ್ದಾರೆ.
ಚೀನಾ ತನ್ನ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬೆನ್ನಲ್ಲೇ ತೈವಾನ್ ಚೀನಾಗೆ ನೆರವಿನ ಹಸ್ತ ಚಾಚಿದೆ.
ಮಾನವೀಯ ಆಧಾರದಲ್ಲಿ ಚೀನಾಗೆ ನಾವು ಅಗತ್ಯ ನೆರವು ನೀಡಲು ಬಯಸುತ್ತಿದ್ದೇವೆ, ಈ ಮೂಲಕ ಹೆಚ್ಚು ಜನರು ಪ್ಯಾಂಡಮಿಕ್ ನಿಂದ ಹೊರಬಂದು ಹೊಸ ವರ್ಷವನ್ನು ಆರೋಗ್ಯಕರ, ಶಾಂತಿಯುತವಾಗಿ ಬದುಕಬಹುದು ಎಂದು ತ್ಸೈ ಹೇಳಿದ್ದಾರೆ.
ಈಗಾಗಲೇ ಕೋವಿಡ್ ಸೋಂಕಿನಿಂದ ಸಾಕಷ್ಟು ನಲುಗಿರುವ ಚೀನಾದ ಆರೋಗ್ಯ ವ್ಯವಸ್ಥೆ ಕುಸಿಯತೊಡಗಿದ್ದು, ಔಷಧಗಳ ಕೊರತೆ ಉಂಟಾಗಿದೆ. ಅಧ್ಯಯನವೊಂದರ ಪ್ರಕಾರ ಚೀನಾದಲ್ಲಿ ದಿನವೊಂದಕ್ಕೆ 9,000 ಮಂದಿ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ಚೀನಾ ತನ್ನಲ್ಲಿಗೆ ಬರುವ ವಿದೇಶಿಗರಿಗೆ ಕ್ವಾರಂಟೈನ್ ನಿಯಮಗಳನ್ನು ಸಡಿಲಿಸಿದ್ದು, ಜನವರಿ 08 ರಿಂದ ವಿದೇಶಗಳಿಗೆ ಹೋಗುವವರಿಗೂ ಚೀನಾ ಅವಕಾಶ ಕಲ್ಪಿಸಲಿದೆ.