ಶಾಲಾ ಪ್ರವಾಸದ ಬಸ್ ಅಪಘಾತ; ಶಿಕ್ಷಕಿ ಸಹಿತ ಹಲವರಿಗೆ ಗಾಯ

Prasthutha|

ಕಾರ್ಕಳ : ಶಾಲಾ ಪ್ರವಾಸಕ್ಕೆ ತೆರಳುವ ಬಸ್ ಮಗುಚಿ ಬಿದ್ದು, ಶಿಕ್ಷಕಿಯರು ಸೇರಿ 20 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಧರ್ಮಸ್ಥಳ- ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಗೂರು ಸಮೀಪ ಪಾಜೆ ಗುಡ್ಡೆ ತಿರುವಿನಲ್ಲಿ ನಡೆದಿದೆ.

- Advertisement -

ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯನಗರ ಜಿಲ್ಲೆಯ ಬಸವೇಶ್ವರ ಪ್ರೌಢ ಶಾಲೆಯ ಮಕ್ಕಳು ಖಾಸಗಿ ಬಸ್’ನಲ್ಲಿ ಪ್ರವಾಸಕ್ಕೆಂದು ಕರಾವಳಿ ಭಾಗಕ್ಕೆ ಬಂದಿದ್ದರು. ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.

Join Whatsapp