ನವದೆಹಲಿ: ಇಂದಿನಿಂದ ಚೀನಾ, ಸಿಂಗಾಪುರ, ಹಾಂಕಾಂಗ್, ಕೊರಿಯಾ, ಥಾಯ್ಲೆಂಡ್ ಮತ್ತು ಜಪಾನ್ ನಿಂದ ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ಕಡ್ಡಾಯವಾಗಿದೆ.
ಈ ದೇಶಗಳಿಂದ ಬರುವವರು ಪರೀಕ್ಷೆಯ ನೆಗೆಟಿವ್ ವರದಿಯ ಬಗ್ಗೆ ಏರ್ ಸುವಿಧಾ ಪೋರ್ಟಲ್ ಮೂಲಕ ಸ್ವಯಂ ಘೋಷಣೆಯ ಅರ್ಜಿಯನ್ನು ಸಲ್ಲಿಸಿದ ಬಳಿಕವಷ್ಟೇ ಚೆಕ್ ಇನ್ ಸಮಯದಲ್ಲಿ ಬೋರ್ಡಿಂಗ್ ಪಾಸ್ ವಿತರಿಸುವಂತೆ ಎಲ್ಲಾ ಏರ್ ಲೈನ್ಸ್ ಗಳಿಗೆ ಸೂಚಿಸಲಾಗಿದೆ.
ಪ್ರಯಾಣ ಆರಂಭಿಸುವ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಮಾತ್ರ ಮಾನ್ಯವಾಗಲಿದೆ.