ಇತಿಹಾಸ ಪ್ರಸಿದ್ಧ ಅಮ್ಮೆಂಬಳ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಉಬೈದ್ BH ಆಯ್ಕೆಯಾಗಿದ್ದಾರೆ.
ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆಯು ಡಿ.30 ರಂದು ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಮಹಲ್ ಖಾಝಿ ಕೂರತ್ ತಂಙಳ್ ನೇತೃತ್ವದಲ್ಲಿ ನೂರುಲ್ ಹುದಾ ಮದ್ರಸ ಸಭಾಂಗಣದಲ್ಲಿ ನಡೆಯಿತು. ಈ ಸಭೆಯಲ್ಲಿ 2023 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್, ಅಧ್ಯಕ್ಷರಾಗಿ ಉಬೈದ್ BH, ಉಪಾಧ್ಯಕ್ಷರನ್ನಾಗಿ ಕರೀಮ್ G, ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್ , ಜೊತೆ ಕಾರ್ಯದರ್ಶಿಯಾಗಿ ರಫೀಕ್ H, ಕೋಶಾಧಿಕಾರಿಯಾಗಿ ಆಸಿಫ್ T, ಲೆಕ್ಕಪರಿಶೋಧಕರಾಗಿ ಸಿರಾಜುದ್ದೀನ್ MSA, ಮನ್ಸೂರ್ G ಹಾಗೂ ನೂತನ ಕಾರ್ಯಕಾರಿ ಸದಸ್ಯರಾಗಿ ಸಿದ್ಧೀಕ್ G, ಹನೀಫ್ bit, ಅಬ್ಬಾಸ್.S, ರಿಯಾಝ್ T, ನಿಜಾಮುದ್ದೀನ್, ಪರ್ವೀಝ್, ನಬೀಲ್ ಇವರನ್ನು ನೇಮಕ ಮಾಡಲಾಯಿತು.