ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಗೆ ದರ ನಿಗದಿ!

Prasthutha|

ನವದೆಹಲಿ: ವಿಶ್ವದಲ್ಲಿಯೇ ಮೊದಲ ಇಂಟ್ರಾನಾಸಲ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಭಾರತ್ ಬಯೋಟೆಕ್ ಸಂಸ್ಥೆಯ iNCOVACC ಅಥವಾ BBV154 ಕೋವಿಡ್ ಲಸಿಕೆಗೆ ದರ ನಿಗದಿ ಮಾಡಲಾಗಿದ್ದು, ಪ್ರತೀ ಡೋಸ್ ಗೆ 800 ರೂ. ನಿಗದಿ ಮಾಡಲಾಗಿದೆ.

- Advertisement -

ಭಾರತ್ ಬಯೋಟೆಕ್  ಮೂಗಿನ ಕೋವಿಡ್ -19 ಲಸಿಕೆ (iNCOVACC) 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ಬಳಸಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ 800 ರೂ., ಸರ್ಕಾರಿ ಆಸ್ಪತ್ರೆಗಳಿಗೆ 325 ರೂ.ಗೆ ಕೇಂದ್ರ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ.

ಜನವರಿ ನಾಲ್ಕನೇ ವಾರದಲ್ಲಿ ಈ ಲಸಿಕೆಯನ್ನು ಹೊರತರಲಾಗುವುದು. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ತೆಗೆದುಕೊಂಡವರು ಮೂಗಿನ ಲಸಿಕೆಯನ್ನು ಹೆಟೆರೋಲಾಗಸ್ ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

- Advertisement -

ಭಾರತ್‌ ಬಯೋಟೆಕ್‌ ಈ ಲಸಿಕೆಯನ್ನು ವಾಷಿಂಗ್ಟನ್‌ ಯೂನಿವರ್ಸಿಟಿ ಸೇಂಟ್‌ ಲೂಯಿಸ್‌ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ್ದು, ವಿಶ್ವದ ಮೊದಲ ಇಂಟ್ರಾನಾಸಲ್‌ ಕೋವಿಡ್ ಲಸಿಕೆ‌ ಎಂಬ ಹೆಗ್ಗಳಿಕೆಗೆ iNCOVACC ಲಸಿಕೆ ಪಾತ್ರವಾಗಿದೆ. ಮೂಗಿನ ಮೂಲಕ ಎರಡು ಹನಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇದು ಇಂಜೆಕ್ಟ್ ಮಾಡುವ ಲಸಿಕೆಗಿಂತಲೂ ಸುರಕ್ಷಿತ ಎನ್ನಲಾಗಿದೆ.

ಇದು SARS-CoV-2 ಸ್ಪೈಕ್ ಪ್ರೊಟೀನ್ನೊಂದಿಗೆ ಮರುಸಂಯೋಜಿಸಿ ಅಡೆನೊವೈರಸ್ ವೆಕ್ಟರ್ಡ್ ಲಸಿಕೆಯಾಗಿದೆ. ಇದನ್ನು ಮೂರು ಹಂತಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.



Join Whatsapp