ಅಧಿಕ ತೂಕ: ಮಹಿಳೆಗೆ ವಿಮಾನ ಹತ್ತಲು ಬಿಡದ ಕತಾರ್ ಏರ್ವೇಸ್

Prasthutha|


ನವದೆಹಲಿ: ಅಧಿಕ ತೂಕ ಕಾರಣದಿಂದ ಕತಾರ್ ಏರ್ ವೇಸ್ ಬ್ರೆಜಿಲಿಯನ್ ರೂಪದರ್ಶಿಯೊಬ್ಬರಿಗೆ ಬೋರ್ಡ್ ಸೀಟ್ ನಿರಾಕರಿಸಲಾದ ಘಟನೆ ವರದಿಯಾಗಿದ್ದು, ಪ್ರಯಾಣ ನಿರಾಕರಿಸಿದ್ದರಿಂದ ಆಕೆಗೆ ಮಾನಸಿಕ ಸಮಾಲೋಚನಾ ಅವಧಿಯ ಶುಲ್ಕ ನೀಡಬೇಕು ಎಂದು ಖತರ್ ಏರ್ವೇಸ್ ಗೆ ನ್ಯಾಯಾಲಯವೊಂದು ಆದೇಶಿಸಿದೆ.

- Advertisement -

38 ವರ್ಷದ ರೂಪದರ್ಶಿ ಜೂಲಿಯಾನಾ ನೆಹ್ಮೆ ಬೈರುತ್ ನಿಂದ ದೋಹಾಗೆ ಹೊರಟಿದ್ದು, ನವೆಂಬರ್ 22 ರಂದು ತುಂಬಾ ದಪ್ಪವಿರುವ ಕಾರಣಕ್ಕಾಗಿ ತನ್ನನ್ನು ವಿಮಾನವನ್ನು ಹತ್ತಲು ನಿರಾಕರಿಸಲಾಗಿದೆ ಎಂದು ತಿಳಿಸಿದ್ದರು.


ಕತಾರ್ ನಂತಹ ಕಂಪನಿಯು ಮಾನವ ತಾರತಮ್ಯವನ್ನು ಅನುಸರಿಸುವುದು ಎಂತಹ ಭಯಾನಕ ಅವಮಾನ. ನಾನು ದಪ್ಪವಾಗಿದ್ದೇನೆ, ಆದರೆ ನಾನು ಎಲ್ಲರಂತೆ ಮನುಷ್ಯಳಲ್ಲವೇ ಎಂದು ತಿಳಿಸಿದ್ದರು. ನ್ಯಾಯಾಧೀಶ ರೆನಾಟಾ ಮಾರ್ಟಿನ್ಸ್ ಡಿ ಕರ್ವಾಲೋ ಡಿಸೆಂಬರ್ 20 ರಂದು ಅವರ ಪರವಾಗಿ ವಾದಿಸಿದರು. ಘಟನೆಯಿಂದ ಉಂಟಾದ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡಲು ಕತಾರ್ ಏರ್ವೇಸ್ ತನ್ನ ಕೌನ್ಸೆಲಿಂಗ್ ಗೆ ಹಣ ಪಾವತಿಸಬೇಕೆಂದು ಆದೇಶಿಸಿದೆ.

- Advertisement -


ಈ ಘಟನೆಗೆ ಪ್ರತಿಕ್ರಿಯಿಸಿರುವ ಕತಾರ್ ಏರ್ ವೇಸ್, “ಕತಾರ್ ಏರ್ ವೇಸ್ ಎಲ್ಲಾ ಪ್ರಯಾಣಿಕರನ್ನು ಗೌರವ ಮತ್ತು ಘನತೆಯಿಂದ ಮತ್ತು ಉದ್ಯಮದ ಅಭ್ಯಾಸಗಳಿಗೆ ಅನುಗುಣವಾಗಿ ನೋಡುತ್ತದೆ. ಯಾರಾದರೂ ಸಹ ಪ್ರಯಾಣಿಕರ ಜಾಗಕ್ಕೆ ಅಡ್ಡಿಯುಂಟುಮಾಡುವ ಮತ್ತು ಅವರ ಭದ್ರತೆಗೆ ಧಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.



Join Whatsapp