ಎಲ್ಲಾ ಸಮಾಜದವರು ಸೌಹಾರ್ದತೆಯಿಂದ ಇರಲು ಅಗತ್ಯ ಕ್ರಮ: ಬೊಮ್ಮಾಯಿ

Prasthutha|

►ದರ್ಗಾ ವೀಕ್ಷಿಸಿದ ಬಳಿಕ‌  ಸಿಎಂ ಹೇಳಿಕೆ….‌

- Advertisement -

ಹುಬ್ಬಳ್ಳಿ : ಎಲ್ಲಾ ಸಮಾಜದವರು ಸೌಹಾರ್ದತೆಯಿಂದ ಇರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ‌‌‌ ಅವರು, ದರ್ಗಾ ಸ್ಥಳಾಂತರ ವೀಕ್ಷಿಸಲು ಬಂದಿದ್ದು, ದರ್ಗಾ ಮುಖ್ಯಸ್ಥರಾದ ಅಲ್ತಾಫ್ ಅವರು ಸಹಕಾರ ನೀಡಿ, ಸ್ಥಳಾಂತರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಿದೆ ಎಂದು ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

- Advertisement -

‌ಹೊಸ ಮಸೀದಿ ಕಟ್ಟಲು ತೀರ್ಮಾನಿಸಿದ ನಂತರ ಎಲ್ಲ ಸಹಕಾರ ನೀಡುವುದಾಗಿ ಅವರಿಗೆ  ತಿಳಿಸಲಾಗಿದೆ ಎಂದರು.

ನಾಗರೀಕತೆ, ಅವಶ್ಯಕತೆಗಳು ಬೆಳೆದಂತೆ ಇಂಥ ಹಲವಾರು ಪ್ರಕರಣಗಳು ಬಂದಿವೆ. ಕೆಲವು ದೇವಸ್ಥಾನಗಳು ಇವೆ. ಇದೇ  ರಸ್ತೆಯಲ್ಲಿ 13 ದೇವಸ್ಥಾನಗಳನ್ನು ಕೆಡವಲಾಗಿದೆ. ಇದು ನೋವಿನ ಸಂಗತಿಯಾದರೂ ಅನಿವಾರ್ಯವಾಗಿದೆ. ಎಲ್ಲರ ಸಹಕಾರದೊಂದಿಗೆ ಮಾಡಬೇಕಾಗುತ್ತದೆ. ಸುಪ್ರೀಂ ಕೋರ್ಟ್ ನ ಕಟ್ಟುನಿಟ್ಟಿನ ಆದೇಶದ ಮೇರೆಗೆ ಇಡೀ ರಾಜ್ಯದಲ್ಲಿ ಈ ರೀತಿ ಕ್ರಮ ಕೈಗೊಳ್ಳಲಾಗಿದೆ. ರಸ್ತೆಯೊಳಗೆ ಬರುವ ದೇವಸ್ಥಾನಗಳನ್ನು ಹಂತ ಹಂತವಾಗಿ ತೆರವು ಮಾಡಿಸಲಾಗುವುದು ಎಂದು ಅವರು ಹೇಳಿದರು.



Join Whatsapp