ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷದ ಚುನಾವಣೆಯಲ್ಲಿ ಬಿಜೆಪಿ ಏನಾದರೂ, ಎರಡಂಕಿಗಿಂತ ಹೆಚ್ಚು ಸೀಟು ಗೆದ್ದರೆ, ತಾನು ಟ್ವಿಟರ್ ತೊರೆಯುವುದಾಗಿ ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ಸವಾಲು ಹಾಕಿದ್ದಾರೆ. ಕೆಲವು ಮಾಧ್ಯಮಗಳ ಮೂಲಕ ಬಿಜೆಪಿಗೆ ಹೈಪ್ ನೀಡಲಾಗುತ್ತಿದೆ ಎಂದು ಅವರು ಮಾಧ್ಯಮಗಳ ವಿರುದ್ಧ ಕಿಡಿಗಾರಿದ್ದಾರೆ.
ತನ್ನ ಬೆಂಬಲದ ಮಾಧ್ಯಮಗಳ ಮೂಲಕ ದೊಡ್ಡ ಮಟ್ಟದ ಹೈಪ್ ಕೊಡಲಾಗಿದೆ, ವಾಸ್ತವದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಡಬಲ್ ಡಿಜಿಟ್ (ಎರಡಂಕಿ) ದಾಟಲೂ ಕಷ್ಟಪಡಬೇಕಿದೆ. ದಯವಿಟ್ಟು ಈ ಟ್ವಿಟ್ ಕಾಪಾಡಿಟ್ಟುಕೊಳ್ಳಿ, ಬಿಜೆಪಿ ಇದಕ್ಕಿಂತ ಒಳ್ಳೆಯ ಫಲಿತಾಂಶ ಪ್ರದರ್ಶಿಸಿದರೆ ನಾನು ಈ ಜಾಗವನ್ನು ತೊರೆಯುತ್ತೇನೆ ಎಂದು ಪ್ರಶಾಂತ್ ಕಿಶೋರ್ ಟ್ವಿಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ವಾರಾಂತ್ಯ ಭೇಟಿ ನೀಡಿದ್ದು, ಮಾಧ್ಯಮಗಳಲ್ಲಿ ಭಾರೀ ಅಬ್ಬರದ ಪ್ರಚಾರ ನೀಡಲಾಗಿತ್ತು. ಈ ವೇಳೆ ಟಿಎಂಸಿಯ ಮಾಜಿ ಸಚಿವ ಸುವೇಂದು ಅಧಿಕಾರಿ ಬಿಜೆಪಿ ಸೇರ್ಪಡೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಹೈಪ್ ಸೃಷ್ಟಿಸಲಾಗಿತ್ತು. ಸಮಾವೇಶವೊಂದರಲ್ಲಿ ಮಾತನಾಡಿದ್ದ ಅಮಿತ್ ಶಾ, ಚುನಾವಣೆ ವೇಳೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಲಿದ್ದಾರೆ, ಬಿಜೆಪಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲಿದೆ ಎಂದಿದ್ದರು.