ಶೌಚಾಲಯದ ಗುಂಡಿಗೆ ಬಿದ್ದು ಎರಡು ವರ್ಷದ ಬಾಲಕ ಮೃತ್ಯು

Prasthutha|

ಕಾಸರಗೋಡು: ಶೌಚಾಲಯದ ಗುಂಡಿಗೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ.

- Advertisement -

ಉಪ್ಪಳ ದ ಅಬ್ದುಲ್ ಸಮದ್-ಅನೀಸಾ ದಂಪತಿಯ  ಪುತ್ರ ಅಬ್ದುಲ್ ರಹ್ಮಾನ್ ಸಹದಾದ್(2) ಮೃತಪಟ್ಟ ಬಾಲಕ.

ಸಮದ್ ಅವರ ಮನೆಯ ಶೌಚಾಲಯದ ಒಂದು ಭಾಗ ಬಿರುಕು ಬಿಟ್ಟಿದ್ದು, ಬಾಲಕ ತಿಳಿಯದೆ ಇದರ ಮೇಲೆ ನಡೆದು ಕೊಂಡು ಹೋದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬಾಲಕನನ್ನು ಹೊರ ತೆಗೆದಿದ್ದು, ಚಿಕಿತ್ಸೆಗಾಗಿ  ಆಸ್ಪತ್ರೆಗೆ ಸಾಗಿಸುವ   ವೇಳೆ ಬಾಲಕ ಮೃತಪಟ್ಟಿದ್ದಾನೆ.

- Advertisement -

ದುಬೈನಲ್ಲಿ ಕಾಸ್ಮೆಟಿಕ್ ವ್ಯಾಪಾರಿಯಾಗಿರುವ ಅಬ್ದುಲ್ ಸಮದ್ ಇತ್ತೀಚೆಗೆ ರಜೆಯ ನಿಮಿತ್ತ ಊರಿಗೆ ಬಂದಿದ್ದರು. ತನ್ನ ಕುಟುಂಬದೊಂದಿಗೆ ಸಂತೋಷದ ರಜಾದಿನಗಳನ್ನು ಕಳೆಯುತ್ತಿದ್ದ  ವೇಳೆ ಸಂಭವಿಸಿದ ಅನಿರೀಕ್ಷಿತ ದುರಂತವು ಅಬ್ದುಲ್  ಸಮದ್ ಅವರನ್ನು ಅಪಾರ ದುಃಖಕ್ಕೀಡುಮಾಡಿದೆ.



Join Whatsapp