ದಂಪತಿಯನ್ನು ತಡೆದು ಹಣ ವಸೂಲಿ; ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

Prasthutha|

ಬೆಂಗಳೂರು: ನಗರದ ಮಾನ್ಯತಾ ಟೆಕ್​ ಪಾರ್ಕ್​ ಬಳಿ ಹೋಗುತ್ತಿದ್ದ ದಂಪತಿಯನ್ನು ತಡೆದು ಬೆದರಿಸಿ ಹಣ ವಸೂಲಿ ಮಾಡಿದ ಹೊಯ್ಸಳ ವಾಹನದ ಕರ್ತವ್ಯದಲ್ಲಿದ್ದ  ಇಬ್ಬರು ಪೊಲೀಸ್​ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

- Advertisement -

ಎಚ್​.ಸಿ ರಾಜೇಶ್ ಹಾಗೂ ನಾಗೇಶ್  ಅಮಾನತುಗೊಂಡ ಪೊಲೀಸರು. ಕ್ಯೂ ಆರ್ ಕೋಡ್ ಮೂಲಕ 1ಸಾವಿರ ರೂ ವಸೂಲಿ ಮಾಡಿದ ಹೊಯ್ಸಳ ಕರ್ತವ್ಯದಲ್ಲಿದ್ದ ಇವರನ್ನು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಅಮಾನತುಗೊಳಿಸಿದ್ದಾರೆ.

ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ದಂಪತಿ ಹಣ ಕೊಡುವುದಿಲ್ಲ ಎಂದಾಗ ಪೊಲೀಸರು ಬೆದರಿಸಿದ್ದಾರೆ. ಬಳಿಕ ದಂಪತಿ 1ಸಾವಿರ ರೂ. ಡಿಜಿಟಲ್ ಪೇಮೆಂಟ್​ ಮಾಡಿದಾಗ ಅವರನ್ನು ಬಿಟ್ಟು ಕಳುಹಿಸಿದ್ದಾರೆ.

- Advertisement -

 ಸ್ನೇಹಿತರ ಪಾರ್ಟಿ ಮುಗಿಸಿ ಕಾರ್ತಿಕ್ ಪೆತ್ರಿ ಮತ್ತು ಅವರ ಪತ್ನಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ದಂಪತಿಯನ್ನು ತಡೆದ ಹೊಯ್ಸಳ ಸಿಬ್ಬಂದಿ 3 ಸಾವಿರ ರೂ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ  ಟ್ವಿಟರ್​ನಲ್ಲಿ  ತನಗೆ ಆದ ನೋವನ್ನುವಿವರಿಸಿದ ಸಂತ್ರಸ್ತ ವ್ಯಕ್ತಿ ನಗರ ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ನಿನ್ನೆ ನಡೆದ ಘಟನೆಯಿಂದ ನಮಗೆ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಅಥವಾ ಮರುದಿನ ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಇಡೀ ಘಟನೆ ನಮ್ಮ ಮನಸ್ಸಿನಲ್ಲಿ ಆಳವಾದ ಗಾಯವನ್ನು ಉಂಟುಮಾಡಿದೆ. ಇದು ಕಾನೂನು ಜಾರಿ ಸಂಸ್ಥೆಗಳ ಮೇಲಿನ ನಮ್ಮ ನಂಬಿಕೆಯನ್ನು ಇಲ್ಲದಂತಾಗಿಸಿದೆ. ಇದು ಭಯೋತ್ಪಾದನೆ ಅಲ್ಲವೇ? ಇದು ಕಾನೂನುಬದ್ಧ ಚಿತ್ರಹಿಂಸೆ ಅಲ್ಲವೇ? ಈ ನೆಲದ ಪ್ರಾಮಾಣಿಕ, ಕೆಳಮಟ್ಟದ ನಾಗರಿಕರನ್ನು ಹೀಗೆ ನಡೆಸಿಕೊಳ್ಳಬೇಕೆ? ಎಂದು ನಗರ ಪೊಲೀಸರನ್ನು ಕಾರ್ತಿಕ್  ಪ್ರಶ್ನಿಸಿದ್ದಾರೆ.



Join Whatsapp