ಮುಸ್ಲಿಮ್ ಎಂಬ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಿದ ವಿ-ಮಾರ್ಟ್ ಮಾಲ್

Prasthutha|

ಕಿಶಂನ್’ಗಂಜ್: ಧರ್ಮದ ಆಧಾರದಲ್ಲಿ ಯುವತಿಯೊಬ್ಬಳನ್ನು ಖಾಸಗಿ ಕಂಪನಿಯೊಂದು ಕೆಲಸದಿಂದ ವಜಾಗೊಳಿಸಿರುವ ಆರೋಪ ಕೇಳಿಬಂದಿದೆ.

- Advertisement -


ಬಿಹಾರದ ಕಿಶನ್’ಗಂಜ್’ನಲ್ಲಿರುವ ವಿ-ಮಾರ್ಟ್ ಮಾಲ್’ನಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಡಾಲಿ ಫಾತಿಮಾ ಎಂಬ ಯುವತಿಯನ್ನು “ಆಕೆ ಮುಸ್ಲಿಮ್ ಎಂಬ ಕಾರಣಕ್ಕೆ” ಕೆಲಸದಿಂದ ವಜಾಗೊಳಿಸಿದ್ದಾರೆ ಎನ್ನಲಾಗಿದೆ.


ಸ್ವತಃ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಫಾತಿಮಾ, ಕಳೆದ 6 ವರ್ಷಗಳಿಂದ ವಿ-ಮಾರ್ಟ್’ನಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಇತ್ತೀಚೆಗೆ ಮುಸ್ಲಿಮರು ಇಲ್ಲಿ ಕೆಲಸ ಮಾಡಬಾರದು ಎಂದು ಮ್ಯಾನೇಜರ್ ಹೇಳಿ, ನಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಇತ್ತೀಚೆಗೆ ಭದ್ರತಾ ಸಿಬ್ಬಂದಿ ನೇಮಕಾತಿಯ ವೇಳೆಯಲ್ಲೂ ಮುಸ್ಲಿಮರನ್ನು ನೇಮಕ ಮಾಡದಂತೆ ಸೂಚನೆ ನೀಡಲಾಗಿತ್ತು ಎಂದು ಆರೋಪಿಸಿದರು.
ಈ ಕುರಿತ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.



Join Whatsapp