ಬೊಗೊಟಾ: ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತೆ ಮೀರಾಬಾಯಿ ಚಾನು, ಕೊಲಂಬಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಮಣಿಕಟ್ಟಿನ ಗಾಯದ ಸಮಸ್ಯೆಯ ಹೊರತಾಗಿಯೂ 49 ಕೆ.ಜಿ. ವಿಭಾಗದಲ್ಲಿ ಒಟ್ಟು 200 ಕೆ.ಜಿ ಭಾರ ಎತ್ತಿದ ಮೀರಾಬಾಯಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಸ್ನ್ಯಾಚ್ ವಿಭಾಗದಲ್ಲಿ 87 ಕೆ.ಜಿ ಮತ್ತು ಕ್ಲೀನ್ ಆ್ಯಂಡ್ ಜೆರ್ಕ್ ವಿಭಾಗದಲ್ಲಿ ಮೀರಾಬಾಯಿ 113 ಕೆ.ಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು.
ಈ ವಿಭಾಗದಲ್ಲಿ ಒಟ್ಟು 206 ಕೆ.ಜಿ ಭಾರ ಎತ್ತಿದ (93 ಕೆ.ಜಿ+113 ಕೆ.ಜಿ) ಚೀನಾದ ಜಿಯಾಂಗ್ ಹುಯಿಹುವಾ ಚಿನ್ನದ ಪದಕ ಮತ್ತು ಟೋಕಿಯೊ ಒಲಿಂಪಿಕ್ ಚಾಂಪಿಯನ್ ಚೀನಾದವರೇ ಆದ ಹೋವ್ ಝಿಹು ಕಂಚಿನ ಪದಕ (ಒಟ್ಟು 198 ಕೆ.ಜಿ) ಗೆದ್ದರು.