ಹುಟ್ಟುಹಬ್ಬ ಆಚರಿಸಿ ಮರಳುವಾಗ ಅಪಘಾತ: ಇಬ್ಬರು ಮೃತ್ಯು

Prasthutha|

ಬಾಗಲಕೋಟೆ: ಇಬ್ಬರು ಯುವಕರು ಹುಟ್ಟು ಹಬ್ಬವನ್ನು ಆಚರಿಸಿ ಮನೆಗೆ  ಮರಳುತ್ತಿದ್ದಾಗ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ‌ದಲ್ಲಿ‌ ಸಾವನ್ನಪ್ಪಿದ ದಾರುಣ ಘಟನೆ ನಗರದ ಗದ್ದನಕೇರಿ ತಾಂಡ ಬಳಿ ಸಂಭವಿಸಿದೆ.

- Advertisement -

ನವನಗರದ ಸಂಗಮೇಶ(21) ಮತ್ತು ಶಿರಗುಪ್ಪಿ ತಾಂಡಾದ ಕಿರಣ (21) ಅವರು ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುವಾಗ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ಸಂಗಮೇಶನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬೈಕ್ ನಲ್ಲಿ ವಾಪಸ್ ಬರುವಾಗ ಹೊಸ ಬೈಪಾಸ್ ರಸ್ತೆಯ ‌ಗದ್ದನಕೇರಿ ತಾಂಡ ಬಳಿ ಈ ದುರಂತ ಸಂಭವಿಸಿದೆ.

- Advertisement -

ಅಪಘಾತ ಸಂಭವಿಸಿದ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



Join Whatsapp