ಜೆಇ ಲಸಿಕೆ ಪಡೆದ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Prasthutha|

ಮಧುಗಿರಿ: ಜೆಇ ಲಸಿಕೆ ಪಡೆದ ಮಕ್ಕಳಿಗೆ ತಲೆಸುತ್ತು ಬಂದ ಕಾರಣ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಮಧುಗಿರಿಯಲ್ಲಿ ನಡೆದಿದೆ.

- Advertisement -


ಪಟ್ಟಣದ ಶಾಲೆಯ 9 ಮಕ್ಕಳು ತಲೆಸುತ್ತು ಬಂದು ಆಸ್ಪತ್ರೆ ಸೇರಿದ್ದಾರೆ ಎಂದು ತಿಳಿದು ಬಂದಿದೆ.


ಈ ವಿಚಾರ ತಿಳಿದಾಕ್ಷಣ ಟಿಹೆಚ್’ಓ ಡಾ. ರಮೇಶ್ ಬಾಬು ತಮ್ಮ ವಾಹನದಲ್ಲೇ ಮಕ್ಕಳನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಮಕ್ಕಳು ಚೇತರಿಸಿಕೊಂಡ ಪರಿಣಾಮ ಆತಂಕ ದೂರವಾಗಿದೆ. ಇದಕ್ಕೂ ಮೊದಲು ಮಕ್ಕಳಿಗೆ ತಲೆಸುತ್ತು, ಸುಸ್ತಾಗುವುದು ಹಾಗೂ ಚಳಿಯ ಅನುಭವಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿತ್ತು.



Join Whatsapp