ಛತ್ತೀಸ್ ಗಢ | ನವಜಾತ ಶಿಶುಗಳ ವಾರ್ಡ್ ನಲ್ಲಿ ವಿದ್ಯುತ್ ಕಡಿತ, 4 ಶಿಶುಗಳ ಸಾವು

Prasthutha|

ರಾಯ್ಪುರ: ನವಜಾತ ಶಿಶುಗಳ ವಾರ್ಡ್ ನಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡ ಪರಿಣಾಮ ನಾಲ್ಕು ಶಿಶುಗಳು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ಅಂಬಿಕಾಪುರ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

- Advertisement -

ಭಾನುವಾರ ರಾತ್ರಿ ನಾಲ್ಕು ಶಿಶುಗಳು ವೈದ್ಯಕೀಯ ಕಾಲೇಜಿನ ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ (ಎಸ್ಎನ್ಸಿಯು) ಇದ್ದಾಗ ವಿದ್ಯುತ್ ವ್ಯತ್ಯಯ ಉಂಟಾದ್ದರಿಂದ ಈ ಘಟನೆ ಸಂಭವಿಸಿದ್ದು,  ಈ ಬಗ್ಗೆ  ಕ್ರಮ ಕೈಗೊಳ್ಳುವಂತೆ ಛತ್ತೀಸ್ಗಢದ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದೇವ್ ಅವರು ಸೂಚಿಸಿದ್ದಾರೆ.

“ತನಿಖಾ ತಂಡವನ್ನು ರಚಿಸುವಂತೆ ನಾನು ಹೆಲ್ತ್ ಸೆಕ್ರೆಟರಿಗೆ ಸೂಚನೆ ನೀಡಿದ್ದೇನೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಅಂಬಿಕಾಪುರ ಆಸ್ಪತ್ರೆಗೆ ಭೇಟಿ ನೀಡಿ, ತನಿಖೆಯ ನಂತರ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು” ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.

Join Whatsapp