ಅಂತಾರಾಷ್ಟ್ರೀಯ ವಾಯುಯಾನ ಸುರಕ್ಷತಾ ರ್‍ಯಾಂಕಿಂಗ್: ಭಾರತಕ್ಕೆ  48ನೇ ಸ್ಥಾನ

Prasthutha|

ನವದೆಹಲಿ: ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ)ಯ  ಜಾಗತಿಕ ವಿಮಾನಯಾನ ಸುರಕ್ಷತಾ ಶ್ರೇಯಾಂಕದಲ್ಲಿ ಭಾರತವು 48 ನೇ ಸ್ಥಾನಕ್ಕೆ ಜಿಗಿದಿದ್ದು, ಇದು ದೇಶಕ್ಕೆ ಈವರೆಗೆ ದೊರೆತ ಗರಿಷ್ಠ ಶ್ರೇಣಿಯಾಗಿದೆ ಎಂದು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

- Advertisement -

ನಾಲ್ಕು ವರ್ಷಗಳ ಹಿಂದೆ, ದೇಶವು ಶ್ರೇಯಾಂಕದಲ್ಲಿ 102 ನೇ ಸ್ಥಾನದಲ್ಲಿತ್ತು.

ಪ್ರಮುಖ ಸುರಕ್ಷತಾ ಅಂಶಗಳ ಪರಿಣಾಮಕಾರಿ ಅನುಷ್ಠಾನದ ವಿಷಯದಲ್ಲಿ ದೇಶದ ಸ್ಕೋರ್ 85.49% ಕ್ಕೆ ಸುಧಾರಿಸಿದೆ, ಇದು ಚೀನಾ (49), ಇಸ್ರೇಲ್ (50) ಮತ್ತು ಟರ್ಕಿ (54) ಗಿಂತ ಮುಂದಿದೆ.

- Advertisement -

2018 ರ ಸಾರ್ವತ್ರಿಕ ಸುರಕ್ಷತಾ ಮೇಲ್ವಿಚಾರಣಾ ಲೆಕ್ಕಪರಿಶೋಧನಾ ಕಾರ್ಯಕ್ರಮದಲ್ಲಿ ಭಾರತದ ಸ್ಕೋರ್ 69.95% ಆಗಿತ್ತೆಂದು ಡಿಜಿಸಿಎ ತಿಳಿಸಿದೆ.

“ಹೊಸ ಸ್ಥಾನಮಾನವನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ಡಿಜಿಸಿಎ ಭಾರತದ ಶ್ರೇಯಾಂಕವನ್ನು ಮತ್ತಷ್ಟು ಸುಧಾರಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ನಾವು ನಮ್ಮ ಎಲ್ಲಾ ಮಧ್ಯಸ್ಥಗಾರರಿಗೆ ಭರವಸೆ ನೀಡುತ್ತೇವೆ” ಎಂದು ಡಿಜಿಸಿಎ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಅಧೀನದಲ್ಲಿರುವ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆ (ಐಸಿಎಓ) ನವೆಂಬರ್ 9ರಿಂದ 16ರವರೆಗೆ ವಾಯುಯಾನ ಸುರಕ್ಷತೆಗೆ ಸಂಬಂಧಿಸಿದ ಮೌಲ್ಯಮಾಪನಗಳನ್ನು ನಡೆಸಿ ಈ ರ್‍ಯಾಂಕಿಂಗ್ ಅನ್ನು ಘೋಷಿಸಿದೆ. ವಾಯುಯಾನ ಸುರಕ್ಷತೆ ಕುರಿತಂತೆ ಆಯಾ ರಾಷ್ಟ್ರಗಳು ಜಾರಿಗೊಳಿಸಿರುವ ಶಾಸನಗಳು,ವಿಮಾನಗಳ ನಿರ್ವಹಣೆ ಹಾಗೂ ಚಾಲನೆಗೆ ಪರವಾನಿಗೆ, ವಿಮಾನ ನಿಲ್ದಾಣದ ಗುಣಮಟ್ಟ ಮತ್ತಿತರ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ರ್‍ಯಾಂಕಿಂಗ್ ನೀಡಲಾಗುತ್ತದೆ.



Join Whatsapp