ಮಂಡ್ಯ | ಶ್ರೀರಂಗಪಟ್ಟಣದ ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿ

Prasthutha|

►’ಹನುಮನ ಪಾದದ ಮೇಲಾಣೆ ಮಂದಿರವಲ್ಲೇ ಕಟ್ಟುವೆವು, ಜೈ ಶ್ರೀರಾಮ್’ ಘೋಷಣೆ

- Advertisement -

ಶ್ರೀರಂಗಪಟ್ಟಣ: ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಹನುಮಾ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಹನುಮಮಾಲಾಧಾರಿಯೊಬ್ಬ ಶ್ರೀರಂಗಪಟ್ಟಣ ಮಸೀದಿಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.

 ಮಸೀದಿ ಬಳಿ ಅಳವಡಿಸಿದ್ದ ಬ್ಯಾರಿಕೇಡ್‌ ಹಾರಿ ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಯನ್ನು ಪೊಲೀಸರು ತಡೆದಿದ್ದಾರೆ.

- Advertisement -

ಹನುಮ ಮಾಲಾಧಾರಿಗಳು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲದಿಂದ ಯಾತ್ರೆ ಪ್ರಾರಂಭಿಸಿ ಜಾಮಿಯಾ ಮಸೀದಿಯವರೆಗೆ ಬಂದ ವೇಳೆ ಹನುಮ ಮಾಲಾಧಾರಿಯೊಬ್ಬ ‘ಹನುಮನ ಪಾದದ ಮೇಲಾಣೆ ಮಂದಿರವಲ್ಲೇ ಕಟ್ಟುವೆವು, ಜೈ ಶ್ರೀರಾಮ್’ ಘೋಷಣೆ ಕೂಗುತ್ತಾ ಮಸೀದಿಗೆ ನುಗ್ಗಲು ಯತ್ನ ನಡೆಸಿದ್ದಾನೆ. ತಕ್ಷಣ ಜಾಗೃತರಾದ ಪೊಲೀಸರು ಮಸೀದಿಗೆ ನುಗ್ಗುವುದನ್ನು ತಡೆದಿದ್ದಾರೆ.

ನೂರಾರು ಸಂಖ್ಯೆಯಲ್ಲಿದ್ದ ಹನುಮ ಮಾಲಾಧಾರಿಗಳನ್ನು ನಿಯಂತ್ರಿಸಲು ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿ ಹರಸಾಹಸಪಟ್ಟರು. ಈ ಘಟನೆಯಿಂದ ಜಾಮೀಯಾ ಮಸೀದಿಯ ಸ್ಥಳದಲ್ಲಿ ಬಿಗಿ ವಾತಾವರಣ ಏರ್ಪಟ್ಟಿತ್ತು. ಅಲ್ಲದೇ, ಯಾತ್ರೆಯ ವೇಳೆ ಸಾರ್ವಜನಿಕ ಸ್ಥಳವೊಂದರಲ್ಲಿದ್ದ ಹಸಿರು ಬಾವುಟವನ್ನು ಬಾಲಕನೋರ್ವ ಹತ್ತಿ, ಕೀಳುತ್ತಿರುವ ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.



Join Whatsapp