ಮೊರ್ಬಿ ದುರಂತದ ಸಂತ್ರಸ್ತರನ್ನು ಭೇಟಿ ಮಾಡಲು 30 ಕೋಟಿ ರೂ. ಖರ್ಚು ಮಾಡಿದ ಮೋದಿ: ಟಿಎಂಸಿ ಆರೋಪ

Prasthutha|

ಕೋಲ್ಕತ್ತಾ: ಗುಜರಾತ್‌ ತೂಗು ಸೇತುವೆ ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಲವು ಗಂಟೆಗಳ ಕಾಲ ಮೊರ್ಬಿಗೆ ಭೇಟಿ ನೀಡಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕ ಸಾಕೇತ್‌ ಗೋಖಲೆ ಆರೋಪಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿದ ಅವರು, 130ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಮೊರ್ಬಿ ದುರಂತದ ಸಂತ್ರಸ್ತರನ್ನು ಪ್ರಧಾನಿ ಮೋದಿಯವರು ಅಕ್ಟೋಬರ್ 30ರಂದು ಭೇಟಿ ಮಾಡಿದ್ದರು. ಅದಕ್ಕಾಗಿ 30 ಕೋಟಿ ರೂಪಾಯಿ ವೆಚ್ಚವಾಗಿದೆ. ಅದರಲ್ಲಿ 5.5 ಕೋಟಿ ರೂಪಾಯಿಗಳು ‘ಸ್ವಾಗತ, ಕಾರ್ಯಕ್ರಮ ನಿರ್ವಹಣೆ ಮತ್ತು ಫೋಟೋಗ್ರಫಿ’ ಗೆ ಖರ್ಚಾಗಿದ್ದು, ಆರ್‌ಟಿಐ ಅಡಿ ಬಹಿರಂಗವಾಗಿದೆ ಎಂದು ದೂರಿದ್ದಾರೆ.

ಮೋರ್ಬಿ ದುರಂತದ 135 ಸಂತ್ರಸ್ತರಿಗೆ ತಲಾ 4 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಆದರೆ ಪ್ರಧಾನಿ ಮೋದಿಯವರ ಭೇಟಿಗೆ ಹೆಚ್ಚಿನ ಖರ್ಚಾಗಿದೆ ಎಂದು ಗೋಖಲೆ ಟೀಕೆ ಮಾಡಿದ್ದಾರೆ.

- Advertisement -

 “ಮೃತಪಟ್ಟ 135 ಸಂತ್ರಸ್ತರಿಗೆ ತಲಾ ₹ 4 ಲಕ್ಷ ಪರಿಹಾರ, ಅಂದರೆ ₹ 5 ಕೋಟಿ ಸಿಕ್ಕಿದೆ. ಕೇವಲ ಮೋದಿಯವರ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಪಬ್ಲಿಕ್‌ ಪಿಆರ್‌‌ ಕೆಲಸಕ್ಕಾಗಿ 135 ಜನರ ಜೀವನಕ್ಕಿಂತ ಹೆಚ್ಚು ವೆಚ್ಚ ಮಾಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.

Join Whatsapp