ವಿದೇಶದಿಂದ ತಂದಿದ್ದ ಚಾಕೊಲೇಟ್ ತಿಂದು 8 ವರ್ಷದ ಬಾಲಕ ಮೃತ್ಯು

Prasthutha|

- Advertisement -

ಹೈದರಾಬಾದ್: ವಿದೇಶದಿಂದ ತಂದಿದ್ದ ಚಾಕೊಲೆಟ್​ ತಿಂದು ಉಸಿರುಗಟ್ಟಿ 8 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ವಾರಂಗಲ್​ ನಲ್ಲಿ ನಡೆದಿದೆ.

ಸಂದೀಪ್​ ಸಿಂಗ್​ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

- Advertisement -

ಆಸ್ಟ್ರೇಲಿಯಾ ಪ್ರವಾಸದಿಂದ ವಾಪಸಾಗುವಾಗ ಕಂಗಾನ್ ಸಿಂಗ್ ತಮ್ಮ ಮಕ್ಕಳಿಗೆ ಚಾಕೊಲೇಟ್ ತಂದಿದ್ದರು. ಸಂದೀಪ್ ಶನಿವಾರ ತನ್ನ ಶಾಲೆಗೆ ಕೆಲವು ಚಾಕೊಲೇಟ್‌ ಗಳನ್ನು ತೆಗೆದುಕೊಂಡು ಹೋಗಿದ್ದ. ಎರಡನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸಂದೀಪ್ ಬಾಯಿಗೆ ಚಾಕೊಲೇಟ್‌ ಹಾಕಿಕೊಂಡಿದ್ದಾನೆ. ಆದರೆ, ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಬಳಿಕ ಆತ ತರಗತಿಯಲ್ಲೇ ಕುಸಿದು ಬಿದ್ದಿದ್ದಾನೆ ಮತ್ತು ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.



Join Whatsapp