ಹೊನ್ನಾಳಿ ಚಂದ್ರು ಸಾವು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಪಘಾತ

Prasthutha|

- Advertisement -

ದಾವಣಗೆರೆ: ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಹೋಲಿಕೆ ರೀತಿಯಲ್ಲೇ ಅಪಘಾತ ನಡೆದ ಘಟನೆ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ‌ ಬಳಿ‌ ನಡೆದಿದೆ.‌

ಬೆಳಗಾವಿ ಮೂಲದ ಪ್ರಕಾಶ್ ಚಂಬಪ್ಪ(28) ಸಾವನ್ನಪ್ಪಿದ್ದಾರೆ‌
ಮೃತದೇಹ ಕಾರಿನ ಹಿಂದಿನ ಸೀಟ್ ಬಳಿ ಪತ್ತೆಯಾಗಿದೆ.

- Advertisement -

ಚಂದ್ರು ಸಾವು ಪ್ರಕರಣ ಸಾಮ್ಯತೆ ಹೊಂದಿರುವ ಪ್ರಕರಣ ಇದಾಗಿದ್ದು, ಪೊಲೀಸರಿಗೆ ಮತ್ತೆ ಸವಾಲಾಗಿ ಪರಿಣಮಿಸಿದೆ. ಆರು ತಿಂಗಳಿನಿಂದಷ್ಟೆ ಮದುವೆ ಆಗಿದ್ದ ಪ್ರಕಾಶ್ ಶಿವಮೊಗ್ಗಕ್ಕೆ ಸ್ನೇಹಿತರನ್ನು ಬಿಡಲು ಕಾರ್ ನಲ್ಲಿ ಬಂದಿದ್ದ. ಹೊನ್ನಾಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಳಗಾವಿಗೆ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ. ಸೇತುವೆಗೆ ಕಾರು ಡಿಕ್ಕಿ ಹೊಡೆದು ಹಳ್ಳಕ್ಕೆ ಕಾರ್ ಪಲ್ಟಿಯಾಗಿ ಬಿದ್ದಿದೆ. ಅತೀ ವೇಗದಿಂದ ಅಪಘಾತ ಆಗಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸುತ್ತ ಅನುಮಾನವೂ ಇದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp