ನವದೆಹಲಿ: ರಷ್ಯಾವನ್ನು ಭಯೋತ್ಪಾದಕ ದೇಶ ಎಂದು ಯುರೋಪ್ ಸಂಸತ್ತು ಘೋಷಿಸಿದೆ.
ರಷ್ಯಾ ಭಯೋತ್ಪಾದನೆ ನಡೆಸುತ್ತಿದೆ ಎಂದು ಘೋಷಣೆಯ ಪರವಾಗಿ ಮತ ಚಲಾಯಿಸುವಾಗ ಯುರೋಪಿಯನ್ ಸಂಸತ್ತಿನ ಸದಸ್ಯರು ಈ ನಿರ್ಧಾರವನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಯುದ್ಧದ ಆರಂಭದಿಂದಲೂ ರಷ್ಯಾ ಭಯೋತ್ಪಾದಕ ದೇಶವೆಂದು ಘೋಷಿಸಲು ಉಕ್ರೇನ್ ನಿಂದ ಬೇಡಿಕೆ ಇತ್ತು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಕಾಲ ಕಾಲಕ್ಕೆ ಈ ಬಗ್ಗೆ ಒತ್ತಾಯಿಸಿದ್ದರು. ಈ ಕಾರಣದಿಂದಲೇ ಯುರೋಪಿಯನ್ ಪಾರ್ಲಿಮೆಂಟ್ ರಷ್ಯಾ ಉಗ್ರ ರಾಷ್ಟ್ರವೆಂದು ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.