ಸವಣೂರು: ಎಸ್’ಡಿಪಿಐ ಬೆಂಬಲಿತ ಗ್ರಾ.ಪಂ ಸದಸ್ಯರಿಂದ ಮತದಾರರ ಪಟ್ಟಿ ಪರಿಶೀಲನೆ

ಸವಣೂರು: ರಾಜ್ಯಾದ್ಯಂತ ಮತದಾರರ ಹೆಸರನ್ನು ಕಳವು ಮಾಡಿದ ಹಗರಣದಲ್ಲಿ ಲಕ್ಷಾಂತರ ಮತದಾರರು ಮತದಾರರ ಪಟ್ಟಿಯಿಂದ ಹೆಸರನ್ನು ಕಳೆದುಕೊಂಡಿರುವ ಆರೋಪದ ಬೆನ್ನಲ್ಲೇ ಎಸ್’ಡಿಪಿಐ ರಂಗಕ್ಕಿಳಿದಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದ್ದಾರೆ.


ಸವಣೂರು 66 ಮತ್ತು 67 ಸಂಖ್ಯೆಯ ಮತದಾರರ ಪಟ್ಟಿಯನ್ನು ಎಸ್’ಡಿಪಿಐ ಬೆಂಬಲಿತ ಗ್ರಾ.ಪಂ ಸದಸ್ಯರು ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿಯೂ ಆದ ರಫೀಕ್ ಎಂ.ಎ ಮತ್ತು ಮತ್ತು ಉಪಾಧ್ಯಕ್ಷರಾದ ಬಾಬು ಎನ್ ಸವಣೂರು ಅವರು ಮತದಾರರ ಪಟ್ಟಿಯನ್ನು ಪರಿಶೀಲಿಸಿದ್ದಾರೆ. 66 ಮತ್ತು 67 ಸಂಖ್ಯೆಯ ಮತದಾರರ ಪಟ್ಟಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಎಲ್ಲಾ ಮತದಾರರ ಹೆಸರು ಸರಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ