ಫಿಪಾ ವಿಶ್ವಕಪ್‌ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ | ಬಲಿಷ್ಠ ಜರ್ಮನಿಗೆ ಆಘಾತವಿಕ್ಕಿದ ಜಪಾನ್‌

Prasthutha|

ಅರ್ಜೆಂಟೀನಾ ತಂಡವನ್ನು ಸೋಲಿಸಿ ಸೌದಿ ಅರೇಬಿಯಾ ಫುಟ್‌ಬಾಲ್‌ ಲೋಕವನ್ನು ಅಚ್ಚರಿಯಲ್ಲಿ ಕೆಡವಿದ ಬೆನ್ನಲ್ಲೇ ಬುಧವಾರವೂ ಫಿಫಾ ವಿಶ್ವಕಪ್‌ನಲ್ಲಿ ಅನಿರೀಕ್ಷಿತ ಫಲಿತಾಂಶ ದಾಖಲಾಗಿದೆ. ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅತಿಹೆಚ್ಚು ಫೈನಲ್ ಆಡಿದ ಮತ್ತು 4 ಬಾರಿ ಚಾಂಪಿಯನ್‌ ಆದ ಹೆಗ್ಗಳಿಕೆಯ ಜರ್ಮನಿ ತಂಡ, ಜಪಾನ್‌ ವಿರುದ್ಧ ಮುಗ್ಗರಿಸಿದೆ.

- Advertisement -

ದೋಹಾದ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ಜಪಾನ್,  2-1 ಗೋಲುಗಳಿಂದ ಬಲಿಷ್ಠ  ಜರ್ಮನಿಯನ್ನು ಸೋಲಿಸಿದೆ. ಅಚ್ಚರಿ ಎಂದರೆ ಮಂಗಳವಾರ ನಡೆದ ಸೌದಿ ಅರೇಬಿಯಾ ವಿರುದ್ಧದ ಪಂದ್ಯದ ಮೊದಲಾರ್ಧದಲ್ಲಿ ಅರ್ಜೆಂಟೀನಾ 1-0 ಗೋಲುಗಳ ಮುನ್ನಡೆ ಸಾಧಿಸಿತ್ತು. 10ನೇ ನಿಮಿಷದಲ್ಲಿ ಮೆಸ್ಸಿ ಪೆನಾಲ್ಟಿ ಮೂಲಕ ಗೋಲು ದಾಖಲಿಸಿದ್ದರು. ಆದರೆ ದ್ವಿತಿಯಾರ್ಧದದಲ್ಲಿ ಸೌದಿ 2 ಗೋಲು ಬಾರಿಸಿ ಗೆಲುವಿನ ನಗೆ ಬೀರಿತ್ತು.

ಬುಧವಾರದ ಪಂದ್ಯದಲ್ಲೂ ಜರ್ಮನಿ ಮೊದಲಾರ್ಧದಲ್ಲಿ 1-0 ಗೋಲುಗಳ ಮುನ್ನಡೆ ಸಾಧಿಸಿತ್ತು. 33ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಇಲ್ಕೆ ಗುಂಡೋಗನ್ ಜರ್ಮನಿಗೆ ಮುನ್ನಡೆ ತಂದುಕೊಟ್ಟರು. ಆದರೆ ದ್ವಿತಿಯಾರ್ಧದ 75ನೇ ನಿಮಿಷದಲ್ಲಿ ಆರ್‌. ಡೋನ್‌ ಮತ್ತು 83ನೇ ನಿಮಿಷದಲ್ಲಿ ಟಿ. ಅಸಾನೊ ಗೋಲು ದಾಖಲಿಸುವ ಮೂಲಕ  ಜಪಾನ್‌, ಐತಿಹಾಸಿಕ ಗೆಲುವು ದಾಖಲಿಸಿತು.ಪಂದ್ಯ ಮುಗಿದ ಬಳಿಕ ಜಪಾನ್‌ ಅಭಿಮಾನಿಗಳು, ಗ್ಯಾಲರಿಯನ್ನು ಸ್ವಚ್ಛಗೊಳಿಸುವ ಮೂಲಕ ಮತ್ತೊಮ್ಮೆ ಮಾದರಿಯಾದರು.

- Advertisement -

ಇದಕ್ಕೂ ಮೊದಲು ಅಲ್‌ ಬೈತ್‌ ಸ್ಟೇಡಿಯಂನಲ್ಲಿ ನಡೆದ ಮೊರಕ್ಕೊ ಮತ್ತು ಕ್ರೊಯೇಷಿಯಾ ನಡುವಿನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಅಂತ್ಯಕಂಡಿತ್ತು



Join Whatsapp