ಕೇಂದ್ರ ಕಾನೂನು ಸಚಿವರ ಸಮ್ಮುಖದಲ್ಲೇ ಕೊಲಿಜಿಯಂ ವ್ಯವಸ್ಥೆಯನ್ನು ಸಮರ್ಥಿಸಿದ ಸಿಜೆಐ ಚಂದ್ರಚೂಡ್

Prasthutha|

ನವದೆಹಲಿ: ನ್ಯಾಯಾಂಗಕ್ಕೆ ನೇಮಕಾತಿ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಕಾನೂನು ಸಚಿವ ಕಿರಣ್ ರಿಜಿಜು ಅವರ ಸಮ್ಮುಖದಲ್ಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಸಮರ್ಥಿಸಿಕೊಂಡಿದ್ದಾರೆ.

- Advertisement -

ಬಾರ್ ಕೌನ್ಸಿಲ್ ಆಫ್ ಇಂಡಿಯಾ ಏರ್ಪಡಿಸಿದ್ದ ಸನ್ಮಾನ ಕಾರ್ಯದಲ್ಲಿ ಮಾತನಾಡಿದ ಅವರು,. ಕೊಲೆಜಿಯಂ “ರಾಷ್ಟ್ರೀಯ ದೃಷ್ಟಿಕೋನ”ವನ್ನು ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ನ್ಯಾಯಾಧೀಶರ ವರ್ಗಾವಣೆಯ ಕುರಿತು ಧರಣಿ ನಡೆಸುತ್ತಿರುವ ಗುಜರಾತ್ ಹೈಕೋರ್ಟ್‌ನ ವಕೀಲರನ್ನು ಭೇಟಿಯಾಗಲು ಒಪ್ಪಿದ ಸಿಜೆಐ ಡಿ.ವೈ. ಚಂದ್ರಚೂದ್ ಅವರು ನ್ಯಾಯ ಕೇಳಿಕೊಂಡು ಬರುವವರು ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

ಅಲ್ಲದೆ ದೇಶದಲ್ಲಿ ಪುರುಷಪ್ರಧಾನ, ಜಾತಿ ಆಧರಿತವಾಗಿರುವ ಕಾನೂನು ವೃತ್ತಿ ಬದಲಾವಣೆ ಆಗಬೇಕಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದರು.

“ಪುರುಷ ಪ್ರಧಾನ, ಕೆಲ ಸಂದರ್ಭಗಳಲ್ಲಿ ಬಹಳಷ್ಟು ಜಾತಿ ಆಧಾರಿತವಾಗುವ ವಕೀಲ ವೃತ್ತಿಯ ವ್ಯವಸ್ಥೆಯು, ನ್ಯಾಯವಾದಿಗಳಾದ ನಾವು ನಮ್ಮ ಸಮಾಜದಲ್ಲಿ ವಿವಿಧ ಸಮುದಾಯಗಳು ಮತ್ತು ಸಮಾಜದ ಅಂಚಿನಲ್ಲಿರುವ ಜನರಿಗೆ ವಕೀಲ ವೃತ್ತಿ ತಲುಪುವಂತೆ ಮಾಡುವ ರೀತಿ ಬದಲಾಗಬೇಕಿದೆ” ಎಂದು ತಿಳಿಸಿದ್ದಾರೆ.

ಇದೀಗ ವಕೀಲ ವೃತ್ತಿ ಮತ್ತು ನ್ಯಾಯಧೀಶರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದ ಅವರು, “ರಾಜಸ್ಥಾನ ನ್ಯಾಯಾಂಗಕ್ಕೆ ಇತ್ತೀಚೆಗೆ ನಡೆದ ನೇಮಕಾತಿ ವೇಳೆ ಶೇ 60 ಮಂದಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಇದು ಬದಲಾಗುತ್ತಿರುವ ಕಾಲದ ಮತ್ತು ಮಹಿಳಾ ಶಿಕ್ಷಣ ಯಶಸ್ವಿಯಾಗಿ ತಲುಪುತ್ತಿರುವುದರ ಸ್ಪಷ್ಟ ಸಂಕೇತವಾಗಿದೆ” ತಿಳಿಸಿದ್ದಾರೆ.



Join Whatsapp