ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ನಿಧನ

Prasthutha|

ಕಲ್ಲಿಕೋಟೆ: ಖ್ಯಾತ ವಿದ್ವಾಂಸರೂ ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕಾರ್ಯದರ್ಶಿಯೂ ಆದ ಎಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ನಿಧನರಾದರು.
ಭಾನುವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು.

- Advertisement -

ಕೋಝಿಕ್ಕೋಡ್ ಜಿಲ್ಲೆಯ ಕರುವಾಂಪೋಯಿಲ್ ಮೂಲದವರಾದ ಅವರು 1950 ರಲ್ಲಿ ಚೇಕುಟ್ಟಿ ಮತ್ತು ಆಯಿಷಾ ಬೀವಿ ದಂಪತಿಗಳ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣದ ನಂತರ ಅವರು ದರ್ಸ್ ಅಧ್ಯಯನದತ್ತ ಮುಖ ಮಾಡಿದರು. ಕಾಂತಪುರಂ ಎ.ಪಿ ಉಸ್ತಾದರ ಶಿಷ್ಯತ್ವವನ್ನು ಸ್ವೀಕರಿಸಿದ ಅವರು ಪೂನೂರು, ಕೋಳಿಕಲ್ ಮತ್ತು ಮಂಙಾಟ್‌ನಲ್ಲಿ ಅಧ್ಯಯನ ಮಾಡಿದರು. 1970ರಲ್ಲಿ ಬಾಖಿಯಾತ್ ನಲ್ಲಿ ಬಿರುದು ಪಡೆದ ಅವರು ಕಾಂತಪುರಂನಲ್ಲಿ ಮುದರ್ರಿಸರಾಗಿ ಸೇವೆಯನ್ನು ಆರಂಭಿಸಿದರು.

 ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಮುಖವನ್ನೇ ಹೋಲುತ್ತಿದ್ದ ಅವರನ್ನು ಚೆರಿಯ ಎ.ಪಿ ಉಸ್ತಾದ್ ಎಂದು ಕರೆಯಲಾಗುತ್ತಿತ್ತು.

- Advertisement -

ಬೆಳಗ್ಗೆ 9 ಗಂಟೆಗೆ ಮರ್ಕಝ್ ನಲ್ಲಿ ಉಸ್ತಾದರ ಮಯ್ಯಿತ್ ನಮಾಝ್ ನಿರ್ವಹಿಸಲಾಗುವುದು. ಸಂಜೆ 4 ಗಂಟೆಗೆ ಕರುವಾಂಪೊಯಿಲ್ ಜುಮಾ ಮಸೀದಿಯ ಖಬರಸ್ಥಾನದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಅವರ ಶಿಷ್ಯರೊಬ್ಬರು ತಿಳಿಸಿದ್ದಾರೆ.



Join Whatsapp