ನ. 19ರಂದು ಅಖಲ ಭಾರತ ಬ್ಯಾಂಕ್ ಮುಷ್ಕರ; ಯೂನಿಯನ್ ಬ್ಯಾಂಕ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ

Prasthutha|

ಬೆಂಗಳೂರು: ಕೇಂದ್ರ ಸರ್ಕಾರದ ಬ್ಯಾಂಕ್ ಗಳ ಖಾಸಗೀಕರಣ, ಬ್ಯಾಂಕ್ ಗಳ ವಿಲೀನ ವಿರೋಧಿಸಿ ಇದೇ 19ರಂದು ಕರೆ ನೀಡಲಾಗಿರುವ ಅಖಿಲ ಭಾರತ ಬ್ಯಾಂಕುಗಳ ಮಷ್ಕರದಲ್ಲಿ ಭಾಗವಹಿಸಲು ಅಲ್ ಇಂಡಿಯಾ ಯೂನಿಯನ್ ಬ್ಯಾಂಕ್ ಅಸೋಸಿಯೇಷನ್ ಸದಸ್ಯರು ನಿರ್ಧಾರ ಕೈಗೊಂಡಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಭಾನುವಾರ ನಡೆದ  ಅಲ್ ಇಂಡಿಯಾ ಯೂನಿಯನ್ ಬ್ಯಾಂಕ್ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಮಾತನಾಡಿದ ಅಖಲ ಭಾರತ ಯೂನಿಯನ್ ಬ್ಯಾಂಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಂಕರ್ , ಇದೇ 19ರಂದು ಕೇಂದ್ರ ಸರ್ಕಾರದ ಬ್ಯಾಂಕುಗಳ ವಿಲೀನ, ಖಾಸಗೀಕರಣ ನೀತಿ ವಿರೋಧಿಸಿ ಸುಮಾರು ಆರು ಲಕ್ಷ ಮಂದಿ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.  ಕೇಂದ್ರ ಸರ್ಕಾರ ಕೈಗೊಂಡಿರುವ 11 ಬ್ಯಾಂಕ್ ಗಳ ಮೇಲಿನ ನೀತಿ ನೌಕರರಿಗೆ ಮಾರಕವಾಗಿದ್ದು. ನ್ಯಾಯಾಲಯದ ಆದೇಶವನ್ನು ಉಲಂಘಿಸಿ ಬ್ಯಾಂಕುಗಳ ವಿಲೀನ ಕಾರ್ಯವನ್ನು ಕೈಗೊಂಡಿದೆ. ಇದರಿಂದ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೀತಿ ವಿರುದ್ಧ ಅಖಲ ಭಾರತ ಮಟ್ಟದಲ್ಲಿ  ಮುಷ್ಕರ ನಡೆಸಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಬ್ಯಾಂಕ್ ನೀತಿಯಿಂದಾಗಿ ಸುಮಾರು ಹದಿಮೂರು ಸಾವಿರ ಉದ್ಯೋಗಿಗಳು ಉದ್ಯೋಗ ಕಳೆದು ಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ತಾನು ಕೈಗೊಂಡಿರುವ ಬ್ಯಾಂಕ್ ವಿರೋಧಿ ನೀತಿಯಿಂದಾಗಿ ನೌಕರರಿಗೆ  ಉಂಟಾಗಿರುವ ನಷ್ಟವನ್ನು ತುಂಬಿಕೊಡಬೇಕೆಂದು ಹೇಳಿದರು.

- Advertisement -

ಯೂನಿಯನ್ ಬ್ಯಾಂಕ್ ಅಸೋಸಿಯೇಷನ್ ನ ಉಪ ಪ್ರಧಾನ ಕಾರ್ಯದರ್ಶಿ ಪದ್ಮನಾಭನ್ ಮಾತನಾಡಿ, ಆಂಧ್ರ ಬ್ಯಾಂಕ್, ಕಾರ್ಪೋರೇಶನ್, ಯೂನಿಯನ್ ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ಎಲ್ಲ ಬ್ಯಾಂಕುಗಳ ನೌಕರರು ಇದೇ 19ರಂದು ನಡೆಯಲಿರುವ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.  ಕೇಂದ್ರ ಸರ್ಕಾರ ಯಾವುದೇ ಬ್ಯಾಂಕ್ ನ ಮ್ಯಾನೇಜ್ಮೆಂಟ್ ಜತೆ ಮಾತುಕತೆ ನಡಸದೇ ಏಕಾಏಕಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. 20, 30ವರ್ಷಗಳಿಂದ ಇರುವ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸದೇ  ಬ್ಯಾಂಕ್ ನೌಕರರ ಹಕ್ಕು ಮತ್ತು ರಕ್ಷಣೆಯನ್ನು ಕಿತ್ತು ಹಾಕುತ್ತಿದ್ದಾರೆ. ಶೇಕಡಾ ಮೂರರಷ್ಟು ನೌಕರರನ್ನು ಉದ್ಯಮದಿಂದ ಕಿತ್ತುಹಾಕುತ್ತಿದ್ದಾರೆ. ಶೇ.10ರಷ್ಟು ಬ್ಯಾಂಕ್ ಗಳ ಶಾಖೆಯನ್ನು ಮುಚ್ಚುವ ಮೂಲಕ ಗ್ರಾಹಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.



Join Whatsapp