ಗಜೇಂದ್ರಗಡದಲ್ಲಿ‌ ಪಾಕಿಸ್ತಾನದ ಹಿಟ್ಲರ್ ಕೀಟ ಪತ್ತೆ

Prasthutha|

ಪೆಂಟ್ಯಾಟೊಮಿಡೆ ಕುಟುಂಬದ ಸಾಮಾನ್ಯವಾಗಿ ಹಿಟ್ಲರ್ ಕೀಟ ಎನ್ನುವ ಮಾನವ ಮುಖ ರಚನೆಯ ಕೆಟಾಕ್ಯಾಂತಸ್ ಇನ್‌ಕಾರ್ನೆಟಸ್ ಕೀಟವು ಗಜೇಂದ್ರಗಡದ ಭೈರಾಪುರ ಬೆಟ್ಟದಲ್ಲಿ ಪತ್ತೆಯಾಗಿದೆ.

- Advertisement -

ಅಪಾರ ಸಸ್ಯ ವೈವಿಧ್ಯದ ಭೈರಾಪುರ ಬೆಟ್ಟದಲ್ಲಿ ಈಗ ಈ ಅಪರೂಪದ ಕೀಟ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಕೊರಿಯಾಗಳಲ್ಲಿ ಈ ಕೀಟವು ಸಹಜವಾಗಿ ಹೆಚ್ಚು ಕಂಡು ಬರುತ್ತವೆ.

ಇವುಗಳ ಪೋಷಕ ಮರಗಳೆಂದರೆ ಗೇರುಬೀಜ, ಗುಲ್‌ಮೊಹರ್, ಶಿವನಿ ಮೊದಲಾದವು. 7ರಿಂದ 9 ತಿಂಗಳು ಬದುಕುವ ಈ ಕೀಟಗಳು ಇರುವ ಮರಗಳ ಎಲೆ, ಹಣ್ಣು, ಕಾಯಿಗಳ ರಸ ಹೀರಿ ಬದುಕುತ್ತವೆ. ಎಲೆಯ ಅಡಿ 150ಕ್ಕೂ ಹೆಚ್ಚು ಮೊಟ್ಟೆ ಇಟ್ಟು ತಮ್ಮ ಬಾಯ್ರಸದಿಂದ ಅಂಟಿಸಿಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.



Join Whatsapp