8ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ಭಾನುವಾರ ತೆರೆಬಿದ್ದಿದೆ. ಪಾಕಿಸ್ತಾನ ತಂಡವನ್ನು 5 ವಿಕೆಟ್ಗಳ ಅಂತರದಲ್ಲಿ ಮಣಿಸಿದ ಇಂಗ್ಲೆಂಡ್, 2ನೇ ಬಾರಿಗೆ ಟಿ20 ಚಾಂಪಿಯನ್ ಗದ್ದುಗೆ ಏರಿದೆ.
ಬೌಲಿಂಗ್ನಲ್ಲಿ 137ರನ್ಗಳಿಗೆ ಪಾಕಿಸ್ತಾನವನ್ನು ನಿಯಂತ್ರಿಸಿದ್ದ ಜಾಸ್ ಬಟ್ಲರ್ ಬಳಗ, ಆ ಬಳಿಕ ಇನ್ನೂ 1 ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು. ಈ ಗೆಲುವಿನೊಂದಿಗೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ಏಕಕಾಲಕ್ಕೆ ಚಾಂಪಿಯನ್ ಆದ ಮೊದಲನೇ ತಂಡ ಎಂಬ ಹೆಗ್ಗಳಿಕೆ ಇಂಗ್ಲೆಂಡ್ ಪಾಲಾಗಿದೆ.
2010ರಲ್ಲಿ ಮೊದಲ ಬಾರಿಗೆ ಚುಟುಕು ಟೂರ್ನಿಯ ಚಾಂಪಿಯನ್ನರಾಗಿದ್ದ ಇಂಗ್ಲೆಂಡ್, ಆ ಬಳಿಕ 2016ರಲ್ಲಿ ಫೈನಲ್ ಪ್ರವೇಶಿಸಿತ್ತಾದರೂ, ವೆಸ್ಟ್ ಇಂಡೀಸ್ಗೆ ಶರಣಾಗಿತ್ತು. ಇದೀಗ 2022ರಲ್ಲಿ 2ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ʻಕ್ರಿಕೆಟ್ ಜನಕ ಖ್ಯಾತಿʼಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.
2007ರಿಂದ 2022ರ ವರೆಗಿನ ಟಿ20 ವಿಶ್ವ ಚಾಂಪಿಯನ್ ವಿಜೇತರ ಪಟ್ಟಿ
2007: ಚಾಂಪಿಯನ್ ತಂಡ: ಭಾರತ | ಗೆಲುವಿನ ಅಂತರ 5 ರನ್| ರನ್ನರ್ಸ್ ಅಪ್; ಪಾಕಿಸ್ತಾನ | ಸರಣಿ ಶ್ರೇಷ್ಟ ಆಟಗಾರ; ಶಾಹಿದ್ ಅಫ್ರಿದಿ
2009: ಚಾಂಪಿಯನ್ ತಂಡ: ಪಾಕಿಸ್ತಾನ | ಗೆಲುವಿನ ಅಂತರ 8 ವಿಕೆಟ್ | ರನ್ನರ್ಸ್ ಅಪ್; ಶ್ರೀಲಂಕಾ | ಸರಣಿ ಶ್ರೇಷ್ಟ ಆಟಗಾರ; ತಿಲಕರತ್ನೆ ದಿಲ್ಶನ್
2010: ಚಾಂಪಿಯನ್ ತಂಡ: ಇಂಗ್ಲೆಂಡ್ | ಗೆಲುವಿನ ಅಂತರ 7 ವಿಕೆಟ್ | ರನ್ನರ್ಸ್ ಅಪ್; ಆಸ್ಟ್ರೇಲಿಯಾ | ಸರಣಿ ಶ್ರೇಷ್ಟ ಆಟಗಾರ; ಕೆವಿನ್ ಪೀಟರ್ಸನ್
2012: ಚಾಂಪಿಯನ್ ತಂಡ: ವೆಸ್ಟ್ ಇಂಡೀಸ್ | ಗೆಲುವಿನ ಅಂತರ; 36 ರನ್ | ರನ್ನರ್ಸ್ ಅಪ್; ಶ್ರೀಲಂಕಾ | ಸರಣಿ ಶ್ರೇಷ್ಟ ಆಟಗಾರ; ಶೇನ್ ವ್ಯಾಟ್ಸನ್
2014: ಚಾಂಪಿಯನ್ ತಂಡ: ಶ್ರೀಲಂಕಾ | ಗೆಲುವಿನ ಅಂತರ; 6 ವಿಕೆಟ್ | ರನ್ನರ್ಸ್ ಅಪ್; ಭಾರತ | ಸರಣಿ ಶ್ರೇಷ್ಟ ಆಟಗಾರ; ವಿರಾಟ್ ಕೊಹ್ಲಿ
2016: ಚಾಂಪಿಯನ್ ತಂಡ: ವೆಸ್ಟ್ ಇಂಡೀಸ್ | ಗೆಲುವಿನ ಅಂತರ; 4 ವಿಕೆಟ್ | ರನ್ನರ್ಸ್ ಅಪ್; ಇಂಗ್ಲೆಂಡ್ | ಸರಣಿ ಶ್ರೇಷ್ಟ ಆಟಗಾರ; ವಿರಾಟ್ ಕೊಹ್ಲಿ
2021: ಚಾಂಪಿಯನ್ ತಂಡ: ಆಸ್ಟ್ರೇಲಿಯಾ | ಗೆಲುವಿನ ಅಂತರ; 8 ವಿಕೆಟ್ | ರನ್ನರ್ಸ್ ಅಪ್; ನ್ಯೂಜಿಲೆಂಡ್ | ಸರಣಿ ಶ್ರೇಷ್ಟ ಆಟಗಾರ; ಡೇವಿಡ್ ವಾರ್ನರ್
2022 – 2021: ಚಾಂಪಿಯನ್ ತಂಡ: ಇಂಗ್ಲೆಂಡ್ | ಗೆಲುವಿನ ಅಂತರ; 5 ವಿಕೆಟ್ | ರನ್ನರ್ಸ್ ಅಪ್; ಪಾಕಿಸ್ತಾನ | ಸರಣಿ ಶ್ರೇಷ್ಟ ಆಟಗಾರ; ಸ್ಯಾಮ್ ಕರ್ರನ್