ಟಿ20 ವಿಶ್ವಕಪ್‌ | ಫೈನಲ್ ಗೆ ಸಜ್ಜಾದ ಪಾಕ್- ಇಂಗ್ಲೆಂಡ್‌

Prasthutha|

►ಚಾಂಪಿಯನ್‌ ತಂಡ ಸೇರಿದಂತೆ  ಎಲ್ಲಾ ತಂಡಗಳಿಗೆ ಸಿಗಲಿರುವ ಬಹುಮಾನದ ಮೊತ್ತ ಎಷ್ಟು ಗೊತ್ತಾ ?

- Advertisement -

ಮೆಲ್ಬರ್ನ್‌: ಕ್ರಿಕೆಟ್‌  ಮಹಾ ಸಂಗಮ ಐಸಿಸಿ ಟಿ20 ವಿಶ್ವಕಪ್-2022 ಟೂರ್ನಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಭಾನುವಾರ ತೆರೆಬೀಳಲಿದ್ದು, ಇಂದು ಇಂಗ್ಲೆಂಡ್‌-ಪಾಕಿಸ್ತಾನ ತಂಡಗಳ ನಡುವೆ ಪ್ರಶಸ್ತಿಗಾಗಿ ಹಣಾಹಣಿ ನಡೆಯಲಿದೆ.

ಟಿ20 ವಿಶ್ವಕಪ್-2022 ಟೂರ್ನಿಯ ವಿಜೇತರು ಸೇರಿದಂತೆ  ಒಟ್ಟು ಬಹುಮಾನದ ಮೊತ್ತವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಈಗಾಗಲೇ ಘೋಷಿಸಿದೆ. 45 ಪಂದ್ಯಗಳು ನಿಗದಿಯಾಗಿದ್ದ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಒಟ್ಟು 45 ಕೋಟಿ ನಗದು ಬಹುಮಾನವನ್ನು ತಂಡಗಳು ಪಡೆದುಕೊಳ್ಳಲಿವೆ.

- Advertisement -

ಅಕ್ಟೋಬರ್‌ 16ರಿಂದ ಗುಂಪು ಹಂತದ ಪಂದ್ಯಗಳು ಮತ್ತು ಅಕ್ಟೋಬರ್ 22ರಿಂದ ಸೂಪರ್-12 ಹಂತ ಪ್ರಾರಂಭವಾಗಿತ್ತು. ಏಳು ಮೈದಾನಗಳಲ್ಲಿ ಸೆಮಿಫೈನಲ್‌ ಸೇರಿದಂತೆ 40ಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ.

ಚಾಂಪಿಯನ್‌ ಪಟ್ಟಕ್ಕೇರುವ ತಂಡ ಈ ಬಾರಿ ಬರೋಬ್ಬರಿ ₹13 ಕೋಟಿಯ ($1.6 ಮಿಲಿಯನ್) ಚೆಕ್‌ ಪಡೆಯಲಿದೆ. ರನ್ನರ್‌ ಅಪ್‌ ಆಗುವ ತಂಡ 6.5 ಕೋಟಿ ನಗದು ($800,000) ಬಹುಮಾನ ಪಡೆಯಲಿದೆ.  ಸೆಮಿಫೈನಲ್‌ನಲ್ಲಿ ಪರಾಜಿತರಾದ ಭಾರತ ಮತ್ತು ನ್ಯೂಜಿಲೆಂಡ್‌ ತಲಾ ₹3.2 ಕೋಟಿ (($400,000) ನಗದು ಪಡೆಯಲಿದೆ.

ಕಳೆದ ಬಾರಿಯ ಟಿ20 ವಿಶ್ವಕಪ್ ಮಾದರಿಯಲ್ಲೇ ಈ ಬಾರಿಯೂ, ಸೂಪರ್ 12 ಹಂತದಲ್ಲಿ ನಿರ್ಗಮಿಸಿದ 8 ತಂಡಗಳು ತಲಾ  ₹57 ಲಕ್ಷ ($ 70,000) ಬಹುಮಾನ ಪಡೆಯಲಿದೆ. ಸೂಪರ್ 12 ಹಂತದ ಪ್ರತಿ ಪಂದ್ಯದ ವಿಜೇತರು ₹32 ಲಕ್ಷ ಪಡೆಯಲಿದ್ದಾರೆ.

ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈ ಬಾರಿ ನೇರವಾಗಿ ಸೂಪರ್‌-12 ಹಂತಕ್ಕೆ ಅರ್ಹತೆ ಪಡೆತ್ತು. ಗುಂಪು ಹಂತದಲ್ಲಿ ಸ್ಪರ್ಧಿಸಿದ್ದ 8 ತಂಡಗಳ ಪೈಕಿ ನೆದರ್ಲ್ಯಾಂಡ್ಸ್, ಶ್ರೀಲಂಕಾ, ಐರ್ಲೆಂಡ್, ಹಾಗೂ ಜಿಂಬಾಬ್ವೆ ತಂಡಗಳು ಸೂಪರ್‌-12 ಹಂತಕ್ಕೆ ಅರ್ಹತೆ ಗಿಟ್ಟಿಸಿತ್ತು. 

ಗುಂಪು ಹಂತದಲ್ಲೇ ನಿರ್ಗಮಿಸಿದ ನಮೀಬಿಯಾ, ವೆಸ್ಟ್‌ಇಂಡೀಸ್‌, ಯುಎಇ ಹಾಗೂ ಸ್ಕಾಟ್ಲೆಂಡ್‌ ತಂಡಗಳು ತಲಾ  ₹32 ಲಕ್ಷ ನಗದು ಬಹುಮಾನ ಪಡೆಯಲಿವೆ.

ಐಸಿಸಿ ಟಿ20 ವಿಶ್ವಕಪ್-2022 ಬಹುಮಾನತ ಮೊತ್ತದ ವಿವರ

ಚಾಂಪಿಯನ್‌ ತಂಡ – $1,600,000 (₹13 ಕೋಟಿ)

ರನ್ನರ್ಸ್-ಅಪ್ – $800,000 (₹6.5 ಕೋಟಿ)

ಸೆಮಿ-ಫೈನಲಿಸ್ಟ್‌ – $400,000 (ತಲಾ ₹3.2 ಕೋಟಿ)

ಸೂಪರ್ 12ರಲ್ಲಿ ಪ್ರತಿ ಪಂದ್ಯ ವಿಜೇತರು – $40,000 (₹32 ಲಕ್ಷ)

ಸೂಪರ್ 12ರಿಂದ ನಿರ್ಗಮಿಸಿದುವ ತಂಡಗಳು – $70,000 (₹57 ಲಕ್ಷ)

ಮೊದಲ ಸುತ್ತಿನಲ್ಲಿ ಗೆಲುವು – $40,000 (₹32 ಲಕ್ಷ)

ಮೊದಲ ಸುತ್ತಿನಲ್ಲಿ ನಿರ್ಗಮನ – $40,000 (₹32 ಲಕ್ಷ)

ಒಟ್ಟು – $5.6 ಮಿಲಿಯನ್ (₹45 ಕೋಟಿ)



Join Whatsapp